ನನ್ನ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಮತಾಂತರಕ್ಕಾಗಿ ಒತ್ತಡ: ತನ್ವೀರ್ ವಿರುದ್ಧ ಮಾಡೆಲ್ ಆರೋಪ

ದೊಡ್ಡ ಕನಸು ಹೊತ್ತು 2020ರಲ್ಲಿ ಬಿಹಾರದ ಯುವತಿಯೋರ್ವಳು ಜಾರ್ಖಂಡ್ ತಲುಪಿದ್ದಳು. ಇಲ್ಲಿ ಯಶ್ ಮಾಡೆಲಿಂಗ್ ಕಂಪನಿಗೆ ಸೇರಿದ ಯುವತಿ ಇದೀಗ ಕಂಪನಿ ಮಾಲೀಕ ತನ್ವೀರ್ ಖಾನ್ ಮೇಲೆ ಲವ್ ಜಿಹಾದ್ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೊಡ್ಡ ಕನಸು ಹೊತ್ತು 2020ರಲ್ಲಿ ಬಿಹಾರದ ಯುವತಿಯೋರ್ವಳು ಜಾರ್ಖಂಡ್ ತಲುಪಿದ್ದಳು. ಇಲ್ಲಿ ಯಶ್ ಮಾಡೆಲಿಂಗ್ ಕಂಪನಿಗೆ ಸೇರಿದ ಯುವತಿ ಇದೀಗ ಕಂಪನಿ ಮಾಲೀಕ ತನ್ವೀರ್ ಖಾನ್ ಮೇಲೆ ಲವ್ ಜಿಹಾದ್ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಯಶ್ ಮಾಡೆಲಿಂಗ್ ಕಂಪನಿಯ ಮಾಲೀಕ ತನ್ವೀರ್ ಅಖ್ತರ್ ಖಾನ್ ತನ್ನ ಧರ್ಮವನ್ನು ಮುಚ್ಚಿಟ್ಟು ತನ್ನ ಹೆಸರನ್ನು ಯಶ್ ಎಂದು ಹೇಳಿದ್ದನು ಎಂದು ಸಂತ್ರಸ್ತ ಮಾಡೆಲ್ ಆರೋಪಿಸಿದ್ದಾರೆ. ತನ್ವೀರ್ ಮಾಡೆಲ್ ಅನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದು ಈ ಬಗ್ಗೆ ಯುವತಿಯ ಬಳಿ ಪ್ರಸ್ತಾಪಿಸಿದನು. ಈ ಸಮಯದಲ್ಲಿ, ಮಾಡೆಲ್ ತನ್ನ ಸ್ನೇಹಿತ ಎಂದು ಪರಿಗಣಿಸಿದ ವ್ಯಕ್ತಿ ತನಗೆ ಸುಳ್ಳು ಹೇಳಿದ್ದಾನೆ ಎಂದು ತಿಳಿದುಬಂದಿತ್ತು.

ವಾಸ್ತವವಾಗಿ, ತನ್ವೀರ್ ತಮ್ಮ ಹೆಸರನ್ನು ಯಶ್ ಎಂದು ಹೇಳಿದನು. ಆದರೆ ಅವರ ನಿಜವಾದ ಹೆಸರು ತನ್ವೀರ್ ಅಖ್ತರ್ ಖಾನ್. ಇದೆಲ್ಲ ಮಾಡೆಲ್ ಗೆ ಗೊತ್ತಾದಾಗ ಆಕೆಯೂ ಆತನ ಜೊತೆಗಿನ ಸ್ನೇಹವನ್ನು ಮುರಿದುಕೊಂಡಿದ್ದಾಳೆ. ಇದು ತನ್ವೀರ್‌ಗೆ ಸರಿ ಹೋಗದ ಆತ ಆಕೆಯನ್ನು ಮತಾಂತರಗೊಳಿಸಿ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದನು.

ತನ್ವೀರ್ ತನ್ನ ಕೆಲವು ಚಿತ್ರಗಳನ್ನು ಮೋಸದಿಂದ ಕ್ಲಿಕ್ ಮಾಡಿ, ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ ಎಂದು ಮಾಡೆಲ್ ಹೇಳಿದ್ದಾರೆ. ಅಷ್ಟೇ ಅಲ್ಲ, ಮಾಡೆಲ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ಮತ್ತೊಂದೆಡೆ, ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ ತನ್ವೀರ್ ಪ್ರತ್ಯಾರೋಪ ಮಾಡಿದ್ದು ವಂಚನೆ ಆರೋಪ ದಾಖಲಿಸಿದ್ದಾನೆ.

ಈ ನಡುವೆ ಮಾಡೆಲ್‌ನ ವಿಡಿಯೋ ಕೂಡ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಮಾಡೆಲ್ ತನಗೆ ಬಾಲ್ಯದಿಂದಲೂ ಮಾಡೆಲಿಂಗ್ ಬಗ್ಗೆ ಒಲವು ಇತ್ತು ಎಂದು ಹೇಳಿದ್ದಾರೆ. ಅದಕ್ಕೇ ಬಿಹಾರದಿಂದ ರಾಂಚಿಗೆ ಬಂದಿದ್ದಳು. ಇಲ್ಲಿ ಅವಳು ಯಶ್ ಮಾಡೆಲಿಂಗ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಆರಂಭದಲ್ಲಿ ಕಂಪನಿಯ ಮಾಲೀಕರು ಅವರ ಹೆಸರನ್ನು ಯಶ್ ಎಂದು ಹೇಳಿದರು. ಈ ಸಮಯದಲ್ಲಿ ನಾವು ಸ್ನೇಹಿತರಾಗಿದ್ದೇವೆ.

ನಂತರ ಅವರ ನಿಜವಾದ ಹೆಸರು ತನ್ವೀರ್ ಎಂದು ತಿಳಿಯಿತು. ಈಗ ಅವನು ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದನು, ನನ್ನನ್ನು ಮದುವೆಯಾಗುವಂತೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸತೊಡಗಿದನು. ಸುಮಾರು ಒಂದೂವರೆ ವರ್ಷದ ನಂತರ ಕೆಲಸ ಬಿಟ್ಟು ರೂಪದರ್ಶಿ ಅಲ್ಲಿಂದ ಭಾಗಲ್ಪುರಕ್ಕೆ ತೆರಳಿದ್ದಳು.

ಕೆಲವು ದಿನಗಳ ನಂತರ, ಅವಳು ತನ್ನ ವೃತ್ತಿಜೀವನಕ್ಕಾಗಿ ಮುಂಬೈಗೆ ಹೋದಳು. ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ ಎಂದು ಮಾಡೆಲ್ ವಿಡಿಯೋದಲ್ಲಿ ಹೇಳಿದ್ದಾಳೆ. ತನ್ವೀರ್ ಇಲ್ಲಿಯೂ ನನ್ನನ್ನು ಹಿಂಬಾಲಿಸಿದ. ಮುಂಬೈನಲ್ಲೂ ಮತಾಂತರಗೊಂಡು ಮದುವೆಯಾಗುವಂತೆ ಒತ್ತಾಯಿಸತೊಡಗಿದ. ನಾನು ನಿರಾಕರಿಸಿದಾಗ, ಅವನು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದನು.

ತನ್ವೀರ್ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ವಿಷಯ ಪೊಲೀಸರಿಗೆ ತಲುಪಿದಾಗ, ತನ್ವೀರ್ ತನ್ನ ತಪ್ಪನ್ನು ಒಪ್ಪಿಕೊಂಡು ಎಫ್ಐಆರ್ ಅನ್ನು ಹಿಂಪಡೆಯುವಂತೆ ಕೇಳಿಕೊಂಡನು. ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ತನ್ವೀರ್ ನ್ಯಾಯಾಲಯದ ಅಫಿಡವಿಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ನನ್ನನ್ನೂ ಕೊಲ್ಲಲು ಯತ್ನಿಸಿದನು. ನಂತರ ಮತ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಮುಂಬೈ ಪೊಲೀಸರು ಇದೀಗ ಈ ಪ್ರಕರಣವನ್ನು ರಾಂಚಿಗೆ ವರ್ಗಾಯಿಸಿದ್ದಾರೆ. ಮತ್ತೊಂದೆಡೆ, ವಿಡಿಯೋ ಬಿಡುಗಡೆ ಮಾಡುವಾಗ ಮಾಡೆಲ್ ಮಾನ್ವಿ, 'ನಾನು ಸಾಯುತ್ತೇನೆ, ಆದರೆ ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ನನ್ನನ್ನು ಈ ರಾಕ್ಷಸನಿಂದ ರಕ್ಷಿಸಿ. ನಾಳೆ ಏನು ಮಾಡುತ್ತಾನೋ ಗೊತ್ತಿಲ್ಲ. ನಾನು ಹಿಂದೂ, ಮುಸಲ್ಮಾನರನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ತನ್ವೀರ್ ಅಖ್ತರ್ ಮೊಹಮ್ಮದ್ ಜೀಲ್ ಖಾನ್ ವಿರುದ್ಧ ಮಹಿಳಾ ಮಾಡೆಲ್ ಅತ್ಯಾಚಾರದ ಆರೋಪದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376(2) (ಎನ್), 328, 506, 504, 323 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com