ಸ್ಯಾನ್ ಫ್ರಾನ್ಸಿಸ್ಕೋ ರಾಯಭಾರ ಕಚೇರಿ ಮೇಲೆ ದಾಳಿ: ಪಂಜಾಬ್, ಹರ್ಯಾಣದಲ್ಲಿ NIA ದಾಳಿ

ಸ್ಯಾನ್ ಫ್ರಾನ್ಸಿಸ್ಕೋ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದು ಪಂಜಾಬ್, ಹರ್ಯಾಣದಲ್ಲಿ NIA ದಾಳಿ ಸಾಮೂಹಿಕ ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸ್ಯಾನ್ ಫ್ರಾನ್ಸಿಸ್ಕೋ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದು ಪಂಜಾಬ್, ಹರ್ಯಾಣದಲ್ಲಿ NIA ದಾಳಿ ಸಾಮೂಹಿಕ ದಾಳಿ ನಡೆಸಿದ್ದಾರೆ.

ಪಂಜಾಬ್, ಹರ್ಯಾಣದ 14 ಪ್ರದೇಶಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, 14 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ (San Francisco) ಭಾರತೀಯ ರಾಯಭಾರ ಕಚೇರಿ (Indian Consulate) ಮೇಲೆ ದಾಳಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(National Investigation Agency) ಬುಧವಾರ ಪಂಜಾಬ್ ಮತ್ತು ಹರ್ಯಾಣದ (Punjab and Haryana) 14 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಈ ವರ್ಷದ ಮಾರ್ಚ್ 19 ಮತ್ತು ಜುಲೈ 2 ರಂದು ಕ್ರಿಮಿನಲ್ ಅತಿಕ್ರಮಣ, ವಿಧ್ವಂಸಕ ಕೃತ್ಯಗಳು, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಕಾನ್ಸುಲೇಟ್ ಅಧಿಕಾರಿಗಳಿಗೆ ಬೆದರಿಕೆಯ ಪ್ರಯತ್ನಗಳು ಮತ್ತು ಬೆಂಕಿಯ ಕಟ್ಟಡಕ್ಕೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ಒಳಗೊಂಡಿರುವ ದಾಳಿಯ ಹಿಂದಿನ ಪಿತೂರಿಯನ್ನು ಬಿಚ್ಚಿಡುವುದು ಎನ್ಐಎ ರೇಡ್‌ನ ಉದ್ದೇಶವಾಗಿದೆ.

ಅಧಿಕೃತ ವಕ್ತಾರರ ಪ್ರಕಾರ, ದಾಳಿಯ ಎಲ್ಲಾ ದುಷ್ಕರ್ಮಿಗಳು ಮತ್ತು ಭಾಗಿಯಾದ ಸಹಚರರನ್ನು ಗುರುತಿಸುವುದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯ ಭಾಗವಾಗಿದೆ. ಪಂಜಾಬ್‌ನ ಮೋಗಾ, ಜಲಂಧರ್, ಲೂಧಿಯಾನ, ಗುರುದಾಸ್‌ಪುರ, ಮೊಹಾಲಿ ಮತ್ತು ಪಟಿಯಾಲ ಮತ್ತು ಹರಿಯಾಣದ ಕುರುಕ್ಷೇತ್ರ ಮತ್ತು ಯಮುನಾನಗರ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್ ಡೇಟಾ ಮತ್ತು ಇತರ ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ. ಭಯೋತ್ಪಾದನಾ ವಿರೋಧಿ ಏಜೆನ್ಸಿಯು ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುವ ಜೊತೆಗೆ ಭಾರತ ವಿರೋಧಿ ದುಷ್ಕರ್ಮಿಗಳಿಗೆ ಬಲವಾದ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com