
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳ
ನವದೆಹಲಿ: ಇತ್ತೀಚೆಗಷ್ಟೇ ಇಳಿಕೆ ಕಂಡಿದ್ದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ.
ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 209 ರೂ ಹೆಚ್ಚಿಸಲಾಗಿದೆ. ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸತತ ಎರಡು ಬಾರಿ 250 (ಅಂದಾಜು) ರೂ ಇಳಿಕೆ ಮಾಡಿದ ನಂತರ 209 ರೂ ಹೆಚ್ಚಳವಾಗಿದೆ.
ಇದನ್ನೂ ಓದಿ: ಭಾರತದ ಮೊದಲ ಆದಿತ್ಯ ಎಲ್ 1 ಮಿಷನ್ ನಿಂದ ಮತ್ತೊಂದು ಶುಭ ಸುದ್ದಿ; ಇಸ್ರೋಗೆ ದೊಡ್ಡ ಗೆಲುವು!
ಈ ಮೂಲಕ ಪರಿಸ್ಕೃತ ದರ ದೆಹಲಿ ಮಾರುಕಟ್ಟೆಯಲ್ಲಿ 1,731 ಕ್ಕೆ ಲಭ್ಯವಾಗುತ್ತದೆ. 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಈ ಮೂಲಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಜುಲೈನಿಂದ ಸತತ ನಾಲ್ಕು ತಿಂಗಳೂ ಹೆಚ್ಚಳ ಮಾಡಿದಂತಾಗಿದೆ.
ಭಾನುವಾರವಷ್ಟೇ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆ ಮಾನದಂಡಗಳಿಗನುಗುಣವಾಗಿ ಈ ಹೆಚ್ಚಳ ಆಗಿದೆ ಎಂದು ತೈಲ ನಿಗಮಗಳು ಹೇಳಿವೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ವಿದೇಶಿ ನೆಲದಿಂದ ಭಾರತದ ವಿರುದ್ಧ ಉಗ್ರ ಸಂಚು ಪ್ರಕರಣ; ಶಂಕಿತ ವ್ಯಕ್ತಿಯನ್ನು ಬಂಧಿಸಿದ NIA
ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1,522.50 ರಿಂದ 1,731.50 ರೂಗೆ ಹೆಚ್ಚಿಸಲಾಗಿದೆ. ನಗರಗಳಾದ್ಯಂತ ಎಲ್ಪಿಜಿ ಗ್ಯಾಸ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಮುಂಬೈನಲ್ಲಿ 19ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,684 ರೂ ಆಗಲಿದೆ.
ಗಮನಾರ್ಹವಾಗಿ, ಸೆಪ್ಟೆಂಬರ್ 1 ರಂದು, ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 158 ರೂ ರಷ್ಟು ಕಡಿತಗೊಳಿಸಿತ್ತು, ಆಗಸ್ಟ್ 1 ರಂದು 19 ಕೆಜಿ ಸಿಲಿಂಡರ್‌ನ ಬೆಲೆ 99.75 ರೂ ರಷ್ಟು ಕಡಿಮೆಯಾಗಿದೆ.