ಬಿಹಾರ: ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಪೂರ್ವಿಕರ ಮನೆಯಲ್ಲಿ ಯುವಕ ಶವವಾಗಿ ಪತ್ತೆ

ಬಿಹಾರದ ನವಾಡ ಜಿಲ್ಲೆಯ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಪೂರ್ವಿಕರ ಮನೆಯಲ್ಲಿ 24 ವರ್ಷದ ಯುವಕ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 
ಶಾಸಕಿ ನೀತು ಸಿಂಗ್
ಶಾಸಕಿ ನೀತು ಸಿಂಗ್

ಪಾಟ್ನಾ: ಬಿಹಾರದ ನವಾಡ ಜಿಲ್ಲೆಯ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಪೂರ್ವಿಕರ ಮನೆಯಲ್ಲಿ 24 ವರ್ಷದ ಯುವಕ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಮೃತ ಯುವಕನನ್ನು ಪಿಯೂಷ್ ಸಿಂಗ್ ಅಲಿಯಾಸ್ ಸುದ್ದು ಎಂದು ಗುರುತಿಸಲಾಗಿದ್ದು, ಹಿಸುವಾ ಶಾಸಕಿಯ ಸಹಾಯಕ ಪ್ರಿನ್ಸ್ ಕುಮಾರ್ ಅವರ ಹತ್ತಿರದ ಸಂಬಂಧಿ ಎಂದು ಹೇಳಲಾಗಿದೆ.

ಶನಿವಾರ ಸಂಜೆ 4.30ರ ಸುಮಾರಿಗೆ ಕೋಣೆಯಲ್ಲಿ ಯುವಕನ ಶವ ಇರುವ ಬಗ್ಗೆ ಗ್ರಾಮಸ್ಥರಿಂದ ಕರೆ ಬಂದ ನಂತರ ಪೊಲೀಸರು ಶಾಸಕರ ಮನೆಗೆ ತೆರಳಿ ಪರಿಶೀಲಿಸಿದ್ದಾರೆ ಎಂದು ನರಹತ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮುನ್ನಾ ಕುಮಾರ್ ವರ್ಮಾ ಅವರು ತಿಳಿಸಿದ್ದಾರೆ.

ಪಿಯೂಷ್ ಶವ ಪತ್ತೆಯಾದ ಮನೆ ಶಾಸಕಿ ನೀತು ಸಿಂಗ್ ಅವರ ಸೋದರ ಮಾವ ಸುಮನ್ ಸಿಂಗ್ ಅವರಿಗೆ ಸೇರಿದ್ದು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕಿ ಮನೆಯಲ್ಲಿ ಇರಲಿಲ್ಲ. "ಶಾಸಕಿಯ ಇಡೀ ಕುಟುಂಬ ಅಕ್ಟೋಬರ್ 25 ರಿಂದ ಪಾಟ್ನಾದಲ್ಲಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಬೆರಳಚ್ಚು ಹಾಗೂ ಇತರೆ ಮಾದರಿಗಳನ್ನು ಸಂಗ್ರಹಿಸಿದೆ. ಸ್ಥಳಕ್ಕೆ ಸ್ನಿಫರ್ ಡಾಗ್ ಅನ್ನು ಸಹ ಕರೆಯಿಸಲಾಗಿದೆ ಎಂದು ನಾವಡ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಅಂಬರೀಶ್ ರಾಹುಲ್ ಅವರು ತಿಳಿಸಿದ್ದಾರೆ.

ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com