ಭಾನುವಾರದ ಸ್ಪೆಷಲ್ 'ಚಂಪಾರಣ್ ಮಟನ್' ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ-ವಿಡಿಯೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದ ಸ್ಪೆಷಲ್ ಚಂಪಾರಣ್ ಮಟನ್' ರೆಸಿಪಿ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಮಾರ್ಗದರ್ಶನದಲ್ಲಿ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ.
ಮಟನ್ ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ
ಮಟನ್ ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದ ಸ್ಪೆಷಲ್ ಚಂಪಾರಣ್ ಮಟನ್' ರೆಸಿಪಿ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಮಾರ್ಗದರ್ಶನದಲ್ಲಿ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟ ಸಭೆ ನಡೆದ ಒಂದು ದಿನದ ಬಳಿಕ ಲಾಲು ಪ್ರಸಾದ್ ಯಾದವ್ ಅವರು ತಂಗಿದ್ದ ಪುತ್ರಿ ಮಿಸಾ ಭಾರತಿ ನಿವಾಸಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ರಾಜಕೀಯ ಚರ್ಚೆ ಜೊತೆಗೆ ಚಂಪಾರಣ್ ಮಟನ್ ಅಡುಗೆ ತಯಾರಿಸಿದ್ದಾರೆ.

ಲಾಲು ಪ್ರಸಾದ್ ಅವರು ಅಡುಗೆ ತಯಾರಿಕೆ ಬಗ್ಗೆ ರಾಹುಲ್ ಅವರಿಗೆ ಹಂತ ಹಂತವಾಗಿ ಹೇಳುತ್ತಾ ಹೋಗುತ್ತಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಹುಲ್ ಗಾಂಧಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳು ಬಂದಿದ್ದು, ಕನ್ನಡಿಗರು ಭಾನುವಾರದ ಬಾಡೂಟಕ್ಕೆ ರಾಹುಲ್ ರೆಸಿಪಿ ಎಂದು ಪ್ರತಿಕ್ರಿಯಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com