ಇಸ್ರೋ ವಿಜ್ಞಾನಿ, ಚಂದ್ರಯಾನ-3ರ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ವಲರ್ಮತಿ ನಿಧನ
ಚಂದ್ರಯಾನ-3 ಉಡಾವಣೆ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನರಾಗಿದ್ದಾರೆ. ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ.
Published: 04th September 2023 09:50 AM | Last Updated: 04th September 2023 05:07 PM | A+A A-

ವಲರ್ಮತಿ
ಶ್ರೀಹರಿಕೋಟ: ಚಂದ್ರಯಾನ-3 ಉಡಾವಣೆ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನರಾಗಿದ್ದಾರೆ. ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ.
ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕ್ಷಣಗಣನೆಯಲ್ಲಿ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಇವರು ಕೊನೆಯ ಕ್ಷಣದವರೆಗೂ ದೇಶದ ಮೂರನೇ ಚಂದ್ರಯಾನ-3ರ ಉಡಾವಣೆಯಲ್ಲಿ ಹಿನ್ನೆಲೆ ಧ್ವನಿ ನೀಡಿದ್ದರು. ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು, ಶನಿವಾರ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಇಸ್ರೊ ಮಾಜಿ ನಿರ್ದೇಶಕ ಪಿ.ವಿ ವೆಂಕಟಕೃಷ್ಣನ್ ಅವರು ಟ್ವಿಟರ್ ಖಾತೆಯಲ್ಲಿ, ‘ಶ್ರೀಹರಿಕೋಟಾದಿಂದ ಇಸ್ರೊ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3 ರ ನಂತರ ಭಾರತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಇಸ್ರೋ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (ಸಂದರ್ಶನ)
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು.