ಜಿ20 ಶೃಂಗಸಭೆ: ನಾಳೆ ಜೋ ಬೈಡನ್, ರಿಷಿ ಸುನಕ್ ಸೇರಿ ವಿಶ್ವ ನಾಯಕರ ಆಗಮನ, ನಾಯಕರನ್ನು ಸ್ವಾಗತಿಸುವವರ ಪಟ್ಟಿ!
ಜಿ20 ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ಭಾರತಕ್ಕೆ ಆಗಮಿಸುತ್ತಿದ್ದ ನಾಳೆ ಸಂಜೆ 6:55ಕ್ಕೆ ಅಮೆರಿಕ ಅಧ್ಯಕ್ಷರನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಮತ್ತು ನಾಗರಿಕ ವಿಮಾನಯಾನ ಜನರಲ್(ನಿವೃತ್ತ) ವಿ.ಕೆ.ಸಿಂಗ್ ಅವರು ಸ್ವಾಗತಿಸಲಿದ್ದಾರೆ.
Published: 07th September 2023 09:50 PM | Last Updated: 07th September 2023 09:50 PM | A+A A-

ಮೋದಿ-ಬೈಡನ್
ನವದೆಹಲಿ: ಜಿ20 ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ಭಾರತಕ್ಕೆ ಆಗಮಿಸುತ್ತಿದ್ದ ನಾಳೆ ಸಂಜೆ 6:55ಕ್ಕೆ ಅಮೆರಿಕ ಅಧ್ಯಕ್ಷರನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಮತ್ತು ನಾಗರಿಕ ವಿಮಾನಯಾನ ಜನರಲ್(ನಿವೃತ್ತ) ವಿ.ಕೆ.ಸಿಂಗ್ ಅವರು ಸ್ವಾಗತಿಸಲಿದ್ದಾರೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಮಧ್ಯಾಹ್ನ 2:15 ಕ್ಕೆ ಬರಮಾಡಿಕೊಳ್ಳಲಿದ್ದಾರೆ. ಆಸ್ಟ್ರೇಲಿಯದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಸಂಜೆ 6:15ಕ್ಕೆ ಸ್ವಾಗತಿಸಲಿದ್ದಾರೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ಕ್ರಮವಾಗಿ ರಾತ್ರಿ 8 ಮತ್ತು 8:45ಕ್ಕೆ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬರಮಾಡಿಕೊಂಡರೆ, ಜವಳಿ ಮತ್ತು ರೈಲ್ವೆ ರಾಜ್ಯ ಸಚಿವ ದರ್ಶನ ವಿಕ್ರಮ್ ಜರ್ದೋಶ್ ಮಧ್ಯಾಹ್ನ 12:30ಕ್ಕೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸ್ವಾಗತಿಸಲಿದ್ದಾರೆ. ಅಶ್ವಿನಿ ಕುಮಾರ್ ಚೌಬೆ ಅವರು ಯುನೈಟೆಡ್ ಕಿಂಗ್‌ಡಮ್ (ಯುಕೆ) ಪ್ರಧಾನಿ ರಿಷಿ ಸುನಕ್ ಅವರನ್ನು ಮಧ್ಯಾಹ್ನ 1:40ಕ್ಕೆ ಸ್ವಾಗತಿಸಲಿದ್ದರೆ. ಇನ್ನು ವಿಕೆ ಸಿಂಗ್ ಅವರು ಚೀನಾದ ಪ್ರಧಾನ ಮಂತ್ರಿ ಲಿ ಕೆಕಿಯಾಂಗ್ ಅವರನ್ನು ಸಂಜೆ 7:45ಕ್ಕೆ ಸ್ವಾಗತಿಸಲಿದ್ದಾರೆ. ನಂತರ ಸಿಂಗ್ ಅವರು ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ರಾತ್ರಿ 8:15ಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರ ಮುಂದೆ 78 ವಾದ್ಯಗಾರರ ಮೇಳದಿಂದ ಪ್ರದರ್ಶನ
ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್ ಯೋಲ್ ಯೂನ್ ಅವರನ್ನು ಸಂಜೆ 5:10ಕ್ಕೆ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರನ್ನು ಸಂಜೆ 5:45ಕ್ಕೆ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಸಂಜೆ 7 ಗಂಟೆಗೆ ರಾಜೀವ್ ಚಂದ್ರಶೇಖರ್ ಅವರು ಬರಮಾಡಿಕೊಳ್ಳಲಿದ್ದಾರೆ.
ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್‌ಸಿಂಗ್ ಕುಲಾಸ್ತೆ ಅವರು ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಬೆಳಿಗ್ಗೆ 6:20ಕ್ಕೆ ಬರಮಾಡಿಕೊಳ್ಳಲಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಟಲಿ ಪ್ರಧಾನಿ ಜಾರ್ಜಿಯೊ ಮೆಲೊನಿ ಅವರನ್ನು ಬೆಳಿಗ್ಗೆ 8:50ಕ್ಕೆ ಸ್ವಾಗತಿಸಲಿದ್ದಾರೆ.
ರೈಲ್ವೆ, ಕಲ್ಲಿದ್ದಲು ಮತ್ತು ಗಣಿಗಳ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಅವರು ಕೊಮೊರೊಸ್ ಒಕ್ಕೂಟದ ಅಧ್ಯಕ್ಷ ಮತ್ತು ಆಫ್ರಿಕನ್ ಒಕ್ಕೂಟದ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಬೆಳಿಗ್ಗೆ 10:25ಕ್ಕೆ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರನ್ನು ಬೆಳಿಗ್ಗೆ 11:45ಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಅವರನ್ನು ರಾತ್ರಿ 9:15ಕ್ಕೆ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ರಾತ್ರಿ 10:15ಕ್ಕೆ ಮತ್ತು ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಪೆರೆಜ್ ಕ್ಯಾಸ್ಟೆಜೊನ್ ಅವರನ್ನು ರಾತ್ರಿ 10:45ಕ್ಕೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಅವರು ಬರಮಾಡಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 9ರಂದು ಮಧ್ಯಾಹ್ನ 12:35ಕ್ಕೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಅನುಪ್ರಿಯಾ ಪಟೇಲ್ ಅವರು ಬರಮಾಡಿಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಶುಕ್ರವಾರ ಭಾರತ ಮಂಟಪದಲ್ಲಿ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಯಲಿದೆ. ನಾಳೆ ಮೂರು ದ್ವಿಪಕ್ಷೀಯ ಸಭೆಗಳನ್ನು ಸಹ ನಿಗದಿಪಡಿಸಲಾಗಿದೆ. ಅತ್ಯಂತ ಪ್ರಮುಖವಾದದ್ದು ಸಂಜೆ 7:45ರ ಸುಮಾರಿಗೆ 45 ನಿಮಿಷಗಳ ಕಾಲ ಅಮೆರಿಕಾದ ಜೊತೆ ಇರುತ್ತದೆ.