ಮುಂಬೈ: ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದ ಕೈದಿ ಪರಾರಿ, ಕೆಲ ಗಂಟೆಗಳ ಬಳಿಕ ಸ್ಮಶಾನದಲ್ಲಿ ಪತ್ತೆ!
ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾದ 26 ವರ್ಷದ ವಿಚಾರಣಾಧೀನ ಕೈದಿಯೊಬ್ಬರು ಬುಧವಾರ ಪರಾರಿಯಾಗಿದ್ದರು.ಆದರೆ, ನಾಲ್ಕು ಗಂಟೆಗಳ ಹುಡುಕಾಟದ ನಂತರ ಸ್ಮಶಾನದಲ್ಲಿ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 07th September 2023 08:03 AM | Last Updated: 07th September 2023 08:03 AM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾದ 26 ವರ್ಷದ ವಿಚಾರಣಾಧೀನ ಕೈದಿಯೊಬ್ಬರು ಬುಧವಾರ ಪರಾರಿಯಾಗಿದ್ದರು.ಆದರೆ, ನಾಲ್ಕು ಗಂಟೆಗಳ ಹುಡುಕಾಟದ ನಂತರ ಸ್ಮಶಾನದಲ್ಲಿ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಥಾಣೆ ಜಿಲ್ಲೆಯ ಭಾಯಂದರ್‌ನ ಆಟೋರಿಕ್ಷಾ ಚಾಲಕ ವಿವೇಕ್ ವಿಶ್ವನಾಥ್ ತೊರ್ಡೆ ಅವರನ್ನು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಿ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಇರಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಆತನನನ್ನು ಸೆಂಟ್ರಲ್ ಮುಂಬೈನ ಜೆಜೆ ಆಸ್ಪತ್ರೆಗೆ ಕರೆದೊಯ್ದದ್ದಾಗ ಈ ಘಟನೆ ನಡೆದಿದೆ ಎಂದು ಎಂದು ಪೊಲೀಸ್ ಉಪ ಕಮಿಷನರ್ ಜಯಂತ್ ಬಜ್ಬಲೆ ತಿಳಿಸಿದ್ದಾರೆ.
ತೊರ್ಡೆ ಅವರು ನವಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರ ಕೊಳೆಗೇರಿ ನಿವಾಸಿಯಾಗಿದ್ದಾನೆ. ನಾಲ್ಕು ಗಂಟೆಗಳ ಹುಡುಕಾಟದ ನಂತರ, ಇಂದಿರಾ ನಗರದ ಸ್ಲಮ್‌ನಲ್ಲಿರುವ ಸ್ಮಶಾನದಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಯಿತು. ನಂತರ ಅಲ್ಲಿಂದ ಆತನನ್ನು ಬಂಧಿಸಿ ಜೆಜೆ ಮಾರ್ಗ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.