ಜಿ-20 ಶೃಂಗಸಭೆಗೆ ಆಗಮಿಸಿದ್ದ ಮಾರಿಷಸ್ ಪ್ರಧಾನಿ ವಾರಣಾಸಿಗೆ ಭೇಟಿ

ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದ ವಿದೇಶಗಳ ನಾಯಕರ ಪೈಕಿ ಕೆಲವರು, ಇನ್ನೂ ಭಾರತ ಪ್ರವಾಸವನ್ನು ಮುಂದುವರೆಸಿದ್ದಾರೆ.
ಮಾರಿಷಸ್ ಪ್ರಧಾನಿ ವಾರಣಾಸಿಗೆ ಭೇಟಿ
ಮಾರಿಷಸ್ ಪ್ರಧಾನಿ ವಾರಣಾಸಿಗೆ ಭೇಟಿ

ನವದೆಹಲಿ: ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದ ವಿದೇಶಗಳ ನಾಯಕರ ಪೈಕಿ ಕೆಲವರು, ಇನ್ನೂ ಭಾರತ ಪ್ರವಾಸವನ್ನು ಮುಂದುವರೆಸಿದ್ದಾರೆ.
 
ಸೌದಿ ಯುವರಾಜ ಭಾರತದ ಪ್ರವಾಸ ಮುಂದುವರೆಸಿ, ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗ್ನಾಥ್  ವಾರಣಾಸಿಗೆ ಭೇಟಿ ನೀಡಿದ್ದಾರೆ.

ಪ್ರವಿಂದ್ ಕುಮಾರ್ ಜಗ್ನಾಥ್ ಅವರು ಎರಡನೇ ಬಾರಿಗೆ ವಾರಣಾಸಿಗೆ ಭೇಟಿ ನೀಡಿದ್ದಾರೆ. ಪತ್ನಿ ಕೊಬಿತಾ ಜಗ್ನಾಥ್ ಹಾಗೂ 17 ಸದಸ್ಯರ ನಿಯೋಗದೊಂದಿಗೆ ಪ್ರವಿಂದ್ ಕುಮಾರ್ ಜಗ್ನಾಥ್ ಅವರು ಈ ಹಿಂದೆ ಏಪ್ರಿಲ್ ನಲ್ಲಿ ವಾರಣಾಸಿಗೆ ಭೇಟಿ ನೀಡಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಕಾಶಿ ವಿಶ್ವನಾಥ ಕಾರಿಡಾರ್ ಗೆ ಭೇಟಿ ನೀಡಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com