ನೋಯ್ಡಾ: ಲಿಫ್ಟ್ ಕುಸಿದು ನಾಲ್ವರು ಕಾರ್ಮಿಕರು ಸಾವು
ನಿರ್ಮಾಣ ಹಂತದಲ್ಲಿರುವ ಹೌಸಿಂಗ್ ಸೊಸೈಟಿ ಗುಂಪಿನ ಸರ್ವಿಸ್ ಲಿಫ್ಟ್ ಕುಸಿದು ಬಿದ್ದ ನಂತರ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವೆಸ್ಟ್ ಗ್ರೇಟರ್ ನೋಯ್ಡಾದಲ್ಲಿ ಶುಕ್ರವಾರ ನಡೆದಿದೆ.
Published: 15th September 2023 01:30 PM | Last Updated: 15th September 2023 01:30 PM | A+A A-

ಸಾಂದರ್ಭಿಕ ಚಿತ್ರ
ನೋಯ್ಡಾ: ನಿರ್ಮಾಣ ಹಂತದಲ್ಲಿರುವ ಹೌಸಿಂಗ್ ಸೊಸೈಟಿ ಗುಂಪಿನ ಸರ್ವಿಸ್ ಲಿಫ್ಟ್ ಕುಸಿದು ಬಿದ್ದ ನಂತರ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವೆಸ್ಟ್ ಗ್ರೇಟರ್ ನೋಯ್ಡಾದಲ್ಲಿ ಶುಕ್ರವಾರ ನಡೆದಿದೆ.
ಇತರ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗೌತಮ್ ಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಅಮ್ರಪಾಲಿ ಡ್ರೀಮ್ ವ್ಯಾಲಿ ಸೊಸೈಟಿಲ್ಲಿ ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಡಿಸಿಪಿ (ಸೆಂಟ್ರಲ್ ನೋಯ್ಡಾ) ರಾಜೀವ್ ದೀಕ್ಷಿತ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ಬಳಸಲಾಗುತ್ತಿದ್ದ ಲಿಫ್ಟ್ 14 ನೇ ಮಹಡಿಯಿಂದ ಕುಸಿದು ಬಿದಿದ್ದೆ. ಘಟನೆಯ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.