ಯುವಕನಿಂದ ಕಿರುಕುಳ: ಪೊಲೀಸರಿಗೆ ದೂರು ನೀಡಲು ಪೋಷಕರು ತೆರಳಿದ ನಂತರ ಮನೆಯಲ್ಲಿ ಬಾಲಕಿ ಆತ್ಮಹತ್ಯೆ!
ತಮ್ಮ ಮಗಳಿಗೆ ಸ್ಥಳೀಯ ಯುವಕನೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ ಮನೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ...
Published: 15th September 2023 03:52 PM | Last Updated: 15th September 2023 08:38 PM | A+A A-

ಸಾಂಕೇತಿಕ ಚಿತ್ರ
ನೋಯ್ಡಾ: ತಮ್ಮ ಮಗಳಿಗೆ ಸ್ಥಳೀಯ ಯುವಕನೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ ಮನೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, 8ನೇ ತರಗತಿಯ ವಿದ್ಯಾರ್ಥಿನಿಗೆ 20 ವರ್ಷದ ಯುವಕನೊಬ್ಬ ಸ್ವಲ್ಪ ಸಮಯದಿಂದ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿದೆ.
ಬಾಲಕಿ ಮತ್ತು ಆರೋಪಿ ಇಬ್ಬರೂ ನೆರೆಹೊರೆಯವರಾಗಿದ್ದು, ಪರಸ್ಪರ ಮೊದಲಿನಿಂದಲೂ ಗೊತ್ತಿರುವವರೇ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಆರು ತಿಂಗಳ ಹಸುಗೂಸಿನ ಮೇಲೆ 20 ವರ್ಷದ ಯುವಕನಿಂದ ಅತ್ಯಾಚಾರ, ಆರೋಪಿ ಬಂಧನ
ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿಯಲ್ಲಿ ಜೇವರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
"ಬಾಲಕಿಯ ತಂದೆ ಮತ್ತು ಸಹೋದರ ಇಂದು ಪೊಲೀಸರನ್ನು ಭೇಟಿ ಮಾಡಿ, ಜಹಾಂಗೀರ್‌ಪುರದಲ್ಲಿ ವಾಸಿಸುವ ಆರೋಪಿ ನಿನ್ನೆ ರಾತ್ರಿ 12.30 ರ ಸುಮಾರಿಗೆ ತಮ್ಮ ಮನೆಗೆ ಬಂದಿದ್ದನು ಎಂದು ತಿಳಿಸಿದ್ದಾರೆ. ಆರೋಪಿ ತನ್ನ ಸಹೋದರಿಯ ಫೋನ್ ಸಂಖ್ಯೆ ಪಡೆದು ಕಿರುಕುಳ ನೀಡಿದ್ದಾನೆ ಸಹೋದರ ಹೇಳಿರುವುದಾಗಿ" ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.