
ಮೋಸ್ಟ್ ವಾಂಟೆಡ್ ಮಾವೋವಾದಿ ಸಂಜಯ್ ದೀಪಕ್ ಬಂಧನ
ಹೈದರಾಬಾದ್: ಕುಖ್ಯಾತ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಸಂಜಯ್ ದೀಪಕ್ ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅವರನ್ನು ಬಂಧಿಸಲಾಗಿದೆ. ಸಂಜಯ್ ದೀಪಕ್ ರಾವ್ ಮೇಲೆ ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಪೊಲೀಸರೊಂದಿಗೆ ಎನ್ಐಎಗೂ ದೀಪಕ್ ರಾವ್ ಮೋಸ್ಟ್ ವಾಂಟೆಡ್ ಆಗಿದ್ದರು. ಮಹಾರಾಷ್ಟ್ರ ಸರ್ಕಾರ ದೀಪಕ್ ರಾವ್ ಮೇಲೆ ರೂ.25 ಲಕ್ಷ ಬಹುಮಾನ ಘೋಷಣೆ ಮಾಡಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ: ಮೊಬೈಲ್ ಕಳ್ಳರಿಂದ ರಿಸೆಪ್ಷನಿಸ್ಟ್ ಗೆ ಇರಿದು ಕೊಲೆ
ಬಂಧಿತ ಮಾವೋವಾದಿ ಅಬೂಜ್ಮಡ್ ಹೋಗಲು 4 ದಿನಗಳ ಹಿಂದೆ ಹೈದರಾಬಾದ್ ಗೆ ಆಗಮಸಿದ್ದ ವೇಳೆ ಈ ಕುರಿತು ಎಸ್ಐಬಿಯಿಂದ ಬಂದ ಖಚಿತ ಮಾಹಿತಿ ಪಡೆದ ಸೈಬರಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೈದರಾಬಾದ್ ನ ಕೂಕಟ್ಪಲ್ಲಿಯ ಮಲೇಷಿಯಾ ಟೌನ್ ನೌಕೆಯಲ್ಲಿ ಸಂದೀಪ್ ವಾಸವಾಗಿದ್ದರು ಎಂದು ಹೈದರಾಬಾದ್ ಡಿಜಿಪಿ ಅಂಜನೀಕುಮಾರ್ ಹೇಳಿದರು.
ಬಂಧಿತ ಸಂಜಯ್ ದೀಪಕ್ ಮಾವೋ ಕೇಂದ್ರ ಸಮಿತಿ ಸದಸ್ಯರಾಗಿದ್ದು, ಪಶ್ಚಿಮ ಕನುಮಲ ವಿಶೇಷ ಜಂಟಿ ಸಮಿತಿ ಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಟ್ರೈಜಂಕ್ಷನ್ ಏರಿಯಾದಲ್ಲಿ ಅವರು ನಿರ್ಣಾಯಕರಾಗಿದ್ದಾರೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು , ಕರ್ನಾಟಕ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದರು.