ಜಮ್ಮು ಮತ್ತು ಕಾಶ್ಮೀರ: ಆಕಸ್ಮಿಕವಾಗಿ ಬಂದೂಕು ಸಿಡಿದು ಸೇನಾ ಯೋಧ ಹುತಾತ್ಮ, ಆರೋಪಿ ಸಹೋದ್ಯೋಗಿ ಬಂಧನ
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ತಮ್ಮ ಸಹೋದ್ಯೋಗಿ ಆಕಸ್ಮಿಕವಾಗಿ ಬಂದೂಕನ್ನು ಒತ್ತಿದ್ದರಿಂದ ಓರ್ವ ಸೇನಾ ಯೋಧ ಮೃತಪಟ್ಟು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Published: 17th September 2023 02:08 PM | Last Updated: 17th September 2023 02:12 PM | A+A A-

ಸಾಂದರ್ಭಿಕ ಚಿತ್ರ
ಬಂಡಿಪೋರಾ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ತಮ್ಮ ಸಹೋದ್ಯೋಗಿ ಆಕಸ್ಮಿಕವಾಗಿ ಬಂದೂಕನ್ನು ಒತ್ತಿದ್ದರಿಂದ ಓರ್ವ ಸೇನಾ ಯೋಧ ಮೃತಪಟ್ಟು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ, ಆರೋಪಿ ಸೇನಾ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ.
J&K | There has been an accidental discharge of a weapon resulting in one fatal casualty and one injury to army personnel. Accused army personnel has been detained. Necessary legal action has been initiated: J&K Police Bandipora
— ANI (@ANI) September 17, 2023
'ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಸೇನಾ ಯೋಧರೊಬ್ಬರು ಸಾವಿಗೀಡಾಗಿದ್ದು, ಮತ್ತೋರ್ವ ಸೇನಾ ಸಿಬ್ಬಂದಿಗೆ ಗಾಯವಾಗಿದೆ. ಆರೋಪಿ ಸೇನಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲಾ ಪೊಲೀಸ್ ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.