ವಿಶೇಷ ಅಧಿವೇಶನದಲ್ಲಿ CEC ಮತ್ತು EC ನೇಮಕಾತಿಗಳ ಮಸೂದೆ ಮಂಡನೆ ಇಲ್ಲ: ಮೂಲಗಳು
ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಐದು ದಿನಗಳ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಬಯಸಿಲ್ಲ ಎಂದು ಮೂಲಗಳು ತಿಳಿಸಿವೆ.
Published: 18th September 2023 09:01 PM | Last Updated: 18th September 2023 09:01 PM | A+A A-

ಲೋಕಸಭೆ
ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಐದು ದಿನಗಳ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಬಯಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮಸೂದೆಯನ್ನು ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಗೆ ನೀಡುವುದು ಸರ್ಕಾರದೊಳಗಿನ ಒಂದು ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 10ರಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದರು.
ಎನ್ ಗೋಪಾಲಸ್ವಾಮಿ, ವಿ ಎಸ್ ಸಂಪತ್ ಮತ್ತು ಎಸ್ ವೈ ಖುರೈಶಿ ಸೇರಿದಂತೆ ಕೆಲವು ಮಾಜಿ ಸಿಇಸಿಗಳು ಸಿಇಸಿ ಮತ್ತು ಇಸಿಗಳನ್ನು ಸಂಪುಟ ಕಾರ್ಯದರ್ಶಿಗೆ ಸಮೀಕರಿಸುವ ನಿಬಂಧನೆಯನ್ನು ವಿರೋಧಿಸಿ ಶನಿವಾರ ಪ್ರಧಾನಿಗೆ ಪತ್ರ ಬರೆದಿದ್ದರು. ಈಗಿರುವಂತೆ, ಚುನಾವಣಾ ಸಮಿತಿಯ ಸದಸ್ಯರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಸಮಾನರಾಗಿದ್ದಾರೆ. ಚುನಾವಣಾ ಆಯುಕ್ತರು ಎಸ್‌ಸಿ ನ್ಯಾಯಾಧೀಶರಂತೆ ಅದೇ ಸ್ಥಾನಮಾನವನ್ನು ಅನುಭವಿಸುತ್ತಾರೆ ಎಂಬುದು ಕೇವಲ ಸ್ಥಾನಮಾನವಲ್ಲ ಆದರೆ ಸಂಕೇತವಾಗಿದೆ. ಇದು ನ್ಯಾಯಾಂಗವು ಸ್ವತಂತ್ರವಾಗಿದ್ದರೆ, ಇಸಿಯೂ ಸಹ ಎಂದು ತೋರಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ವಿಶೇಷ ಅಧಿವೇಶನ: ಉಭಯ ಸದನಗಳು ಮುಂದೂಡಿಕೆ; ನಾಳೆ ಹೊಸ ಸಂಸತ್ ಭವನದಲ್ಲಿ ಕಲಾಪ ಮುಂದುವರಿಕೆ
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವು ಸಂಸ್ಥೆಯ ಸ್ವಾಯತ್ತತೆಯನ್ನು ತೋರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಸ್ಥಾನಮಾನವನ್ನು ಕಸಿದುಕೊಳ್ಳಬಾರದು. ಏಕೆಂದರೆ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸಬೇಕು. ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ವ್ಯವಹರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಂಸತ್ತಿನ ಅಧಿವೇಶನದ ಮುನ್ನಾದಿನದಂದು ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಭಾನುವಾರ ಪ್ರತಿಪಕ್ಷ ನಾಯಕರು ಮಸೂದೆಯ ವಿರುದ್ಧ ಮಾತನಾಡಿದರು. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಮಸೂದೆಯನ್ನು ಚರ್ಚೆಗೆ ಮತ್ತು ಅಂಗೀಕಾರಕ್ಕೆ ಕೈಗೆತ್ತಿಕೊಳ್ಳಬಾರದು ಎಂಬ ಅಭಿಪ್ರಾಯ ಸರ್ಕಾರದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.