ದೆಹಲಿ: ಚಾರ್ಜಿಂಗ್ ವೇಳೆ ಇ-ಸ್ಕೂಟರ್ ಬ್ಯಾಟರಿ ಸ್ಫೋಟ!

ಚಾರ್ಜಿಂಗ್ ವೇಳೆ ಇ-ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡಿದೆ. ದಕ್ಷಿಣ ದೆಹಲಿಯ ಸಿಆರ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಫೋಟ (ಸಾಕೇತಿಕ ಚಿತ್ರ)
ಸ್ಫೋಟ (ಸಾಕೇತಿಕ ಚಿತ್ರ)
Updated on

ನವದೆಹಲಿ: ಚಾರ್ಜಿಂಗ್ ವೇಳೆ ಇ-ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡಿದೆ. ದಕ್ಷಿಣ ದೆಹಲಿಯ ಸಿಆರ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

ಮಂಗಳವಾರ ರಾತ್ರಿ 11.45 ರ ಸುಮಾರಿಗೆ ಅಂಗಡಿ ಮಾಲೀಕರು ದ್ವಿಚಕ್ರ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿದ್ದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿಯು ಕಲ್ಕಾಜಿ ನಿವಾಸಿ ರಾಜು ಸಾಹು ಅವರ ಮಾಲೀಕತ್ವದಲ್ಲಿದೆ ಎಂದು ತಿಳಿದುಬಂದಿದೆ. ರಾತ್ರಿ 11:47 ರ ವೇಳೆಗೆ ಸಿಕೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿರುವುದರ ಬಗ್ಗೆ ಕರೆ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳಿಸಲಾಯಿತು. ರಾಜು ಸಾಹು ಅವರಿಗೆ ಸೇರಿದ ದ್ವಿಚಕ್ರ ವಾಹನ ಇದಾಗಿದ್ದು, ಅಂಗಡಿಯೊಳಗೆ ಇದ್ದ ಅಕ್ವೇರಿಯಂ ಬಳಿ ದ್ವಿಚಕ್ರವಾಹನವನ್ನು ಚಾರ್ಜ್ ಗೆ ಹಾಕಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com