ರಾಂಚಿ: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರ ಸಾವಿಗೀಡಾದ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ.
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯದ ಆಟದ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ದುಮ್ಕಾ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾದ ನಂತರ ಹನ್ಸ್ದಿಹಾ ಪ್ರದೇಶದ ಆಟದ ಮೈದಾನದ ಪಕ್ಕದಲ್ಲಿ ಹಲವಾರು ಪ್ರೇಕ್ಷಕರು ಟೆಂಟ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇದೇ ಸಂದರ್ಭದಲ್ಲೇ ಸಿಡಿಲು ಬಡಿದಿದ್ದು ಈ ವೇಳೆ ಸಿಡಿಲು ಬಡಿದಿದೆ. ಸಿಡಿಲು ಟೆಂಟ್ ಮೇಲೆ ಅಪ್ಪಳಿಸಿದ್ದು, ಈ ವೇಳೆ ಟೆಂಟ್ ಒಳಗಿದ್ದ ಶಿವಲಾಲ್ ಸೊರೆನ್ (32 ವರ್ಷ) ಮತ್ತು ಸಂತ್ಲಾಲ್ ಹೆಂಬ್ರಾಮ್ (20 ವರ್ಷ) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅದೇ ಗುಡಾರದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ಪ್ರಭಾರ ಪೊಲೀಸ್ ಠಾಣಾಧಿಕಾರಿ ಜಿತೇಂದ್ರ ಕುಮಾರ್ ಸಾಹು ತಿಳಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಿಲ್ಲಾ ಸಿವಿಲ್ ಸರ್ಜನ್ ಬಚ್ಚಾ ಪ್ರಸಾದ್ ಸಿಂಗ್ ಮಾತನಾಡಿ, ಅವರಲ್ಲಿ ಒಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Advertisement