ಭುವನೇಶ್ವರ: ರಾಮನಾಥ್ ಗೋಯೆಂಕಾ ಅವರು ಸಾಹಿತ್ಯದ ಶಕ್ತಿಯನ್ನು ನಂಬಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಅವರು ಹೇಳಿದ್ದಾರೆ.
ಭಾನುವಾರ ಭುವನೇಶ್ವರದಲ್ಲಿ ನಡೆದ ಒಡಿಶಾ ಸಾಹಿತ್ಯೋತ್ಸವ 2023 ರಲ್ಲಿ ಮಾತನಾಡಿದ ಸೊಂತಾಲಿಯಾ ಅವರು, ಹಿರಿಯರ ಮತ್ತು ಚೊಚ್ಚಲ ಇಬ್ಬರ ಸಾಹಿತ್ಯದ ಶ್ರೇಷ್ಠತೆಯನ್ನು ಸಂಭ್ರಮಿಸಲು ಮತ್ತು ಗೌರವಿಸುವುದಕ್ಕಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅದಕ್ಕಿಂತ ಮುಖ್ಯವಾಗಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಅವರ ನೆನಪಿಗಾಗಿ ಇದನ್ನು ಪ್ರಾರಂಭಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.
"ನಾವು ಬದುಕುತ್ತಿರುವ ಸಮಾಜದ ಪಥವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ರಾಮನಾಥಜಿ ನಂಬಿದ್ದರು. ಸಾಹಿತ್ಯವು ಆಧುನಿಕ ಸಮಾಜದ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ನಂಬಿದ್ದರು. ಏಕೆಂದರೆ ಅದು ಓದುಗರ ಮನಸ್ಸನ್ನು ಸಂಪೂರ್ಣವಾಗಿ ವಿಭಿನ್ನ ಪ್ರಪಂಚಕ್ಕೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಸೊಂತಾಲಿಯಾ ಅವರು ತಿಳಿಸಿದ್ದಾರೆ.
Advertisement