ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣ: ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ 14ನೇ ಆರೋಪಿ

ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ನಾರಾ ಲೋಕೇಶ್ ಹೆಸರನ್ನು ಒಳಗೊಂಡ ಸಿಐಡಿ ಇಂದು ವಿಜಯವಾಡ ಎಸಿಬಿ ನ್ಯಾಯಾಲಯಕ್ಕೆ ಮೊಮೊ ದಾಖಲಿಸಿದೆ.
ನಾರಾ ಲೋಕೇಶ್
ನಾರಾ ಲೋಕೇಶ್

ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ನಾರಾ ಲೋಕೇಶ್ ಹೆಸರನ್ನು ಒಳಗೊಂಡ ಸಿಐಡಿ ಇಂದು ವಿಜಯವಾಡ ಎಸಿಬಿ ನ್ಯಾಯಾಲಯಕ್ಕೆ ಮೊಮೊ ದಾಖಲಿಸಿದೆ. ಇದರೊಂದಿಗೆ ಅಮರಾವತಿ ಒಳವರ್ತುಲ ರಸ್ತೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸಿಐಡಿ ಸಿದ್ಧತೆ ನಡೆಸಿದೆ.

ಈ ಪ್ರಕರಣದಲ್ಲಿ ಸಿಐಡಿ ಈಗಾಗಲೇ ಚಂದ್ರಬಾಬು ಅವರನ್ನು ಎ1 ಎಂದು ಸೇರಿಸಿದೆ. ನಾರಾಯಣನನ್ನು ಎ2 ಎಂದು ಸೇರಿಸಿದೆ. ಇದೀಗ ಅದೇ ಪ್ರಕರಣದಲ್ಲಿ 14ನೇ ಆರೋಪಿಯನ್ನಾಗಿ ಲೋಕೇಶ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ತಮ್ಮ ವೈಯಕ್ತಿಕ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲು ಒಳ ವರ್ತುಲ ರಸ್ತೆಯ ಅಲೈನ್ ಮೆಂಟ್ ಬದಲಾಯಿಸಿದ್ದಾರೆ ಎಂದು ಸಿಐಡಿ ಆರೋಪಿಸಿದೆ.

ಇದೇ ಪ್ರಕರಣದಲ್ಲಿ ಚಂದ್ರಬಾಬು ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com