ಡಿಜಿಟಲ್ ಇಂಡಿಯಾ ಮಸೂದೆ: ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿ ವರೆಗೂ ದಂಡ ಹಾಕಲು ಪ್ರಸ್ತಾವನೆ!
ಡಿಜಿಟಲ್ ಇಂಡಿಯಾ ಮಸೂದೆಯ ನಿಬಂಧನೆಗಳ ಕೆಲವು ಅಂಶಗಳು ಬಹಿರಂಗಗೊಂಡಿದ್ದು, ಸರ್ಕಾರ, ಜಾರಿಯಾಗಲಿರುವ ಈ ಕಾಯ್ದೆಯಡಿ ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿವರೆಗೂ ದಂಡ ವಿಧಿಸುವ ಪ್ರಸ್ತಾವನೆ ಹೊಂದಿದೆ.
Published: 28th September 2023 03:27 AM | Last Updated: 28th September 2023 01:55 PM | A+A A-

ಡಿಜಿಟಲ್ ಇಂಡಿಯಾ ಮಸೂದೆ (ಸಾಂಕೇತಿಕ ಚಿತ್ರ)
ನವದೆಹಲಿ: ಡಿಜಿಟಲ್ ಇಂಡಿಯಾ ಮಸೂದೆಯ ನಿಬಂಧನೆಗಳ ಕೆಲವು ಅಂಶಗಳು ಬಹಿರಂಗಗೊಂಡಿದ್ದು, ಸರ್ಕಾರ, ಜಾರಿಯಾಗಲಿರುವ ಈ ಕಾಯ್ದೆಯಡಿ ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿವರೆಗೂ ದಂಡ ವಿಧಿಸುವ ಪ್ರಸ್ತಾವನೆ ಹೊಂದಿದೆ.
ಪ್ರಸ್ತಾವಿತ ಮಸೂದೆಯ ಪ್ರಕಾರ, ಸೈಬರ್ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುವ, ಪಡೆದಿರುವ, ಸಂಚಾರ ಡೇಟಾವನ್ನು, ರವಾನಿಸಲಾಗಿರುವ ಟ್ರಾಫಿಕ್ ಡೇಟಾವನ್ನು ಸಂಗ್ರಹಿಸಲು ಹಾಗೂ ನಿಗಾ ವಹಿಸಲು ಯಾವುದೇ ಏಜೆನ್ಸಿಗಳಿಗೆ ಅಧಿಕಾರ ನೀಡಬಹುದಾಗಿದೆ.
ಇದೇ ವೇಳೆ ಮಾಲ್ವೆರ್ ಅಥವಾ ವೈರಾಣುಗಳು ಹರಡುವುದನ್ನು ಒಳ ಪ್ರವೇಶಿಸುವುದನ್ನು ಪತ್ತೆ ಮಾಡಿ ತಡೆಗಟ್ಟುವುದೂ ಈ ಮಸೂದೆಯ ಒಂದು ಉದ್ದೇಶವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಮೇಟಿ) ಡಿಜಿಟಲ್ ಇಂಡಿಯಾ ಬಿಲ್‌ನ ಕರಡು ಪ್ರತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ. 22 ವರ್ಷಗಳ ಹಿಂದೆ ಇಂಟರ್ನೆಟ್‌ನ ಆರಂಭಿಕ ದಿನಗಳಲ್ಲಿ ಜಾರಿಗೆ ತಂದು ಈಗ ಅಸ್ತಿತ್ವದಲ್ಲಿರುವ ಐಟಿ ಕಾಯ್ದೆಯನ್ನು ಬದಲಿಸಲು ಉದ್ದೇಶಿಸಿರುವ ಮಸೂದೆ ಇದಾಗಿದೆ.
ಇದನ್ನೂ ಓದಿ: ಸೈಬರ್ ಕ್ರೈಮ್ ತಡೆಯಲು ಆನ್‌ಲೈನ್ ಅಪಾಯಗಳನ್ನು ಅರಿತುಕೊಳ್ಳಿ: ಬೆಂಗಳೂರು ನಗರ ಪೊಲೀಸ್ ಕಮಿಷನರ್
"ಡಿಜಿಟಲ್ ಇಂಡಿಯಾ ಮಸೂದೆಯು ಕಟ್ಟುಪಾಡುಗಳ ಉಲ್ಲಂಘನೆಗಾಗಿ ಸಂಸ್ಥೆಗಳ ಮೇಲೆ 500 ಕೋಟಿ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದು" ಎಂದು ಮೂಲಗಳು ತಿಳಿಸಿವೆ. ಕುಂದುಕೊರತೆಗಳನ್ನು ನಿಭಾಯಿಸುವ ಉದ್ದೇಶಿತ ಡಿಜಿಟಲ್ ಇಂಡಿಯಾ ಪ್ರಾಧಿಕಾರವು ದಂಡದ ಪ್ರಮಾಣವನ್ನು ನಿರ್ಧರಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಕಾಯಿದೆಯಡಿ ವಿವಾದಗಳು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೆ ಬರುವ ಸಾಧ್ಯತೆಯಿಲ್ಲ ಮತ್ತು ಡಿಜಿಟಲ್ ಇಂಡಿಯಾ ಅಥಾರಿಟಿ ಒದಗಿಸಿದ ನಿರ್ಣಯದಿಂದ ತೃಪ್ತರಾಗದ ಸಂಸ್ಥೆ/ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.