ಉತ್ತರ ಪ್ರದೇಶ: ಮನೆ ಮೇಲೆ ಪಾಕಿಸ್ತಾನದ ಧ್ವಜ ಹಾಕಿದ್ದ ತಂದೆ ಮತ್ತು ಮಗನ ಬಂಧನ, ವಿಡಿಯೋ!
ಬುಧನ್‌ಪುರ ಅಲಿಗಂಜ್ ಗ್ರಾಮದ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುವಕರು ಧ್ವಜಾರೋಹಣ ಮಾಡುತ್ತಿರುವುದನ್ನು ನೆರೆಹೊರೆಯವರು ವಿಡಿಯೋ ಮಾಡಿ ಟ್ವಿಟರ್‌ನಲ್ಲಿ ಹಾಕಿದ್ದು ವೈರಲ್ ಆಗಿತ್ತು.
Published: 28th September 2023 05:25 PM | Last Updated: 28th September 2023 07:44 PM | A+A A-

ಪಾಕ್ ಧ್ವಜ ಹಾರಾಟ
ಮೊರಾದಾಬಾದ್(ಉತ್ತರಪ್ರದೇಶ): ಬುಧನ್‌ಪುರ ಅಲಿಗಂಜ್ ಗ್ರಾಮದ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುವಕರು ಧ್ವಜಾರೋಹಣ ಮಾಡುತ್ತಿರುವುದನ್ನು ನೆರೆಹೊರೆಯವರು ವಿಡಿಯೋ ಮಾಡಿ ಟ್ವಿಟರ್‌ನಲ್ಲಿ ಹಾಕಿದ್ದು ವೈರಲ್ ಆಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿ ಪೊಲೀಸರು ವರದಿ ದಾಖಲಿಸಿಕೊಂಡು ಆರೋಪಿ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.
ಅಲಿಗಂಜ್ ಬುಧನ್‌ಪುರ ಗ್ರಾಮದ ಶ್ರೀಮಂತರೊಬ್ಬರ ಮನೆಯ ಮೇಲೆ ಯುವಕನೊಬ್ಬ ಪಾಕಿಸ್ತಾನಿ ಧ್ವಜ ಹಾರಿಸಿದ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕ ಮೇಲ್ಛಾವಣಿಯ ಮೇಲೆ ಧ್ವಜಾರೋಹಣ ಮಾಡುತ್ತಿದ್ದು, ಕೆಲವರು ಮೆಟ್ಟಿಲುಗಳ ಮೇಲೆ ನಿಂತು ಮಾತನಾಡುತ್ತಿದ್ದಾರೆ.
भिखमंगे पाकिस्तान पर इतना प्रेम उमड़ता है तो झंडा लगाने से कुछ न होगा। उधर ही बस जाओ जाकर, कोई नहीं रोकेगा। वीडियो मुरादाबाद का है। पाकिस्तानी झंडा लगाने वाले सलमान और रईस के खिलाफ देशद्रोह के आरोप में मामला दर्ज हो गया है। सलमान हिरासत में और रईस फरार है। pic.twitter.com/Ss4buUFWiG
— SANJAY TRIPATHI (@sanjayjourno) September 27, 2023
ವಿಡಿಯೋ ನೋಡಿದ ನಂತರ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದು ಅವರು ರಯೀಸ್ ಮನೆಗೆ ತಲುಪಿದಾಗ ಅಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿದೆ. ಧ್ವಜವನ್ನು ವಶಪಡಿಸಿಕೊಳ್ಳುವುದರೊಂದಿಗೆ, ಪೊಲೀಸರು ರಯೀಸ್ ಮತ್ತು ಆತನ ಮಗ ಸಲ್ಮಾನ್ ಅನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಉಜ್ಜಯಿನಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆಟೋದಲ್ಲಿ ರಕ್ತದ ಕಲೆ ಪತ್ತೆ, ಚಾಲಕನ ಬಂಧನ
ಬುಧನ್‌ಪುರ ಅಲಿಗಂಜ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣದಲ್ಲಿ, ಎನ್‌ಇಪಿಎ ಔಟ್‌ಪೋಸ್ಟ್ ಇನ್‌ಚಾರ್ಜ್ ಕುಲದೀಪ್ ಕುಮಾರ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿ ರಯೀಸ್ ಮತ್ತು ಅವರ 25 ವರ್ಷದ ಮಗ ಸಲ್ಮಾನ್ ಅವರನ್ನು ಬಂಧಿಸಲಾಗಿದೆ. ಸಲ್ಮಾನ್ ಗ್ರಾಮದಲ್ಲಿ ಟೈಲರ್ ಅಂಗಡಿ ಹೊಂದಿದ್ದಾನೆ. ಸದ್ಯ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಮೋಹಿತ್ ಚೌಧರಿ ತಿಳಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.