ಯೋಗಿ ಡಿಜಿಟಲ್ ಮೀಡಿಯಾ ನೀತಿ: Influencers ಗೆ ಭರ್ಜರಿ ಆದಾಯ; ದೇಶ ವಿರೋಧಿ ಕಂಟೆಂಟ್ ಗೆ ಜೈಲು ಶಿಕ್ಷೆ!

ಆನ್‌ಲೈನ್‌ನಲ್ಲಿ ಅಶ್ಲೀಲ ಅಥವಾ ಮಾನಹಾನಿಕರ ಅಂಶ ಪ್ರಸಾರ ಮಾಡುವುದು ಕ್ರಿಮಿನಲ್ ಮಾನನಷ್ಟ ಆರೋಪಗಳಿಗೆ ಕಾರಣವಾಗಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಗಂಭೀರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಿಎಂ ಯೋಗಿ ಆದಿತ್ಯನಾಥ್
ಸಿಎಂ ಯೋಗಿ ಆದಿತ್ಯನಾಥ್
Updated on

ಲಖನೌ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಆಗಸ್ಟ್ 27 ರಂದು ವಿವಾದಾತ್ಮಕ ಹೊಸ ಡಿಜಿಟಲ್ ಮೀಡಿಯಾ ನೀತಿ 2024ಕ್ಕೆ ಅನುಮೋದನೆ ನೀಡಿದೆ.

ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ “ದೇಶ ವಿರೋಧಿ ಕಂಟೆಂಟ್ ಅಪ್‌ಲೋಡ್ ಮಾಡುವ ಇನ್ ಫ್ಲ್ಯುಯನ್ಸರ್' ಅಥವಾ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳವನ್ನು ಉಂಟು ಮಾಡಿದೆ.

ದೇಶ ವಿರೋಧಿ, ಸರ್ಕಾರ ವಿರೋಧಿ, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯವನ್ನು ರೂಪಿಸುವುದಕ್ಕಾಗಿ ಜೀವಾವಧಿ ಶಿಕ್ಷೆಯ ನಿಬಂಧನೆಯನ್ನುಸಹ ಒಳಗೊಂಡಿದೆ. ಯಾವುದೇ ಸಂದರ್ಭದಲ್ಲೂ ವಿಷಯವು ಅಸಭ್ಯ, ಅಶ್ಲೀಲ ಅಥವಾ ದೇಶ ವಿರೋಧಿಯಾಗಿರಬಾರದು ಎಂದು ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಅಶ್ಲೀಲ ಅಥವಾ ಮಾನಹಾನಿಕರ ಅಂಶ ಪ್ರಸಾರ ಮಾಡುವುದು ಕ್ರಿಮಿನಲ್ ಮಾನನಷ್ಟ ಆರೋಪಗಳಿಗೆ ಕಾರಣವಾಗಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಗಂಭೀರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮತ್ತೊಂದೆಡೆ ಜಾಹೀರಾತು ನೀತಿ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಮತ್ತು ಆದಾಯವನ್ನು ಸುರಕ್ಷಿತಗೊಳಿಸಲು ಡಿಜಿಟಲ್ ಮಾಧ್ಯಮ ವೇದಿಕೆಗಳನ್ನು ಉತ್ತೇಜಿಸುತ್ತದೆ. ಹೊಸ ನೀತಿಯಡಿ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ಇನ್ ಫ್ಲ್ಯುಯನ್ಸರ್' ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಸಾಧನೆಗಳನ್ನು ಎತ್ತಿ ತೋರಿಸುವ ವೀಡಿಯೊ ಕಂಟೆಂಟ್‌ಗಾಗಿ ತಿಂಗಳಿಗೆ ರೂ. 8 ಲಕ್ಷದವರೆಗೆ ಗಳಿಸಬಹುದು. ಇನ್ ಫ್ಲ್ಯುಯನ್ಸರ್', ವಿವಿಧ ಸೋಶಿಯಲ್ ಮೀಡಿಯಾದ ಖಾತೆದಾರರು, ಆಪರೇಟರ್ ಗಳ ನಿರ್ದಿಷ್ಟ ಆದಾಯದ ಮಿತಿಯನ್ನು ಸಹ ಪ್ರಕಟಿಸಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್
ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024 ಬಿಡುಗಡೆ

ಪ್ಲಾಟ್‌ಫಾರ್ಮ್ X ನಲ್ಲಿ, ಒಬ್ಬ ವ್ಯಕ್ತಿಯು ತಿಂಗಳಿಗೆ ಪಡೆಯಬಹುದಾದ ಗರಿಷ್ಠ ಮೊತ್ತವು ರೂ. 5 ಲಕ್ಷ ರೂ. ಫೇಸ್‌ಬುಕ್‌ಗೆ, 4 ಲಕ್ಷ ರೂ. ಇನ್‌ಸ್ಟಾಗ್ರಾಮ್ ತಿಂಗಳಿಗೆ 3 ಲಕ್ಷ ರೂ. ಮಿತಿಯನ್ನು ಹಾಕಲಾಗಿದೆ. ಯು ಟ್ಯೂಬ್ ನಲ್ಲಿ ವಿಷಯಕ್ಕೆ ತಕ್ಕಂತೆ ಹಣವನ್ನು ನಿಗದಿಪಡಿಸಲಾಗಿದೆ. ಸ್ಟ್ಯಾಂಡರ್ಡ್ ವೀಡಿಯೊಗಳಾದರೆ ತಿಂಗಳಿಗೆ ರೂ. 8 ಲಕ್ಷದವರೆಗೆ ಗಳಿಸಬಹುದು. ಆದರೆ ಕಿರುಚಿತ್ರಗಳು ರೂ. 7 ಲಕ್ಷ ನಿಗದಿಗೊಳಿಸಲಾಗಿದೆ. ಪಾಡ್‌ಕಾಸ್ಟ್‌ಗಳು ರೂ. 6 ಲಕ್ಷಕ್ಕೆ ಸೀಮಿತವಾಗಿವೆ. ಯೂಟ್ಯೂಬ್‌ನಲ್ಲಿನ ಇತರ ಪ್ರಕಾರದ ಕಂಟೆಂಟ್‌ಗಳನ್ನು ಗರಿಷ್ಠ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಕ್ಷ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಹೇಳಿದೆ.

ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ, ನೀತಿಯ ದುರ್ಬಳಕೆಯನ್ನು ಪ್ರಶ್ನಿಸಿದರು. ಆಕ್ಷೇಪಾರ್ಹ ವಿಷಯದ ವ್ಯಾಖ್ಯಾನಗಳು ಮತ್ತು ಸರ್ಕಾರದ ಟೀಕೆಗಳನ್ನು ರಾಷ್ಟ್ರವಿರೋಧಿ ಎಂದು ವರ್ಗೀಕರಿಸಲಾಗುತ್ತದೆಯೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಸುಳ್ಳಾಗಿದ್ದರೂ ಸರ್ಕಾರವನ್ನು ಹೊಗಳುವವರಿಗೆ ಲಕ್ಷಾಂತರ ರೂ. ಸಾರ್ವಜನಿಕ ಹಣವನ್ನು ನೀಡಲು ಮತ್ತು ಸಾಮಾಜಿಕವಾಗಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವವರಿಗೆ ಜೈಲು, ಜೀವಾವಧಿ ಶಿಕ್ಷೆಯನ್ನು ನೀಡುವ ನಿಬಂಧನೆಯನ್ನು ತಂದಿದೆ ಎಂದು ಸಮಾಜವಾದಿ ಪಕ್ಷ ಎಕ್ಸ್ ನಲ್ಲಿ ಫೋಸ್ಟ್ ಮಾಡುವ ಮೂಲಕ ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com