ಮೈತ್ರಿ ಧರ್ಮ ಪಾಲನೆಗಾಗಿ ದೆಹಲಿಯಲ್ಲಿ ಕಾಂಗ್ರೆಸ್ ಗೆ 1 ಸ್ಥಾನ: ಆಮ್ ಆದ್ಮಿ ಪಕ್ಷ

ಉತ್ತರ ಪ್ರದೇಶದಲ್ಲಿ ಆರ್ ಎಲ್ ಡಿ INDI ಮೈತ್ರಿಕೂಟ ತೊರೆದ ಬಳಿಕ ಈ ಒಕ್ಕೂಟ ಅಕ್ಷರಶಃ ಇತಿಹಾಸದ ಪುಟಗಳನ್ನು ಸೇರಿದ್ದು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವೂ ಕಾಂಗ್ರೆಸ್ ನ ಕೈಬಿಟ್ಟಿದೆ. 
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್

ನವದೆಹಲಿ: ಉತ್ತರ ಪ್ರದೇಶದಲ್ಲಿ ಆರ್ ಎಲ್ ಡಿ INDI ಮೈತ್ರಿಕೂಟ ತೊರೆದ ಬಳಿಕ ಈ ಒಕ್ಕೂಟ ಅಕ್ಷರಶಃ ಇತಿಹಾಸದ ಪುಟಗಳನ್ನು ಸೇರಿದ್ದು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವೂ ಕಾಂಗ್ರೆಸ್ ನ ಕೈಬಿಟ್ಟಿದೆ. 

7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಕಾಂಗ್ರೆಸ್ ಗೆ ಸ್ಥಾನ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸುವುದಕ್ಕೆ ಕನಿಷ್ಟ ಅರ್ಹತೆ ಇಲ್ಲದೇ ಇದ್ದರೂ 1 ಸ್ಥಾನವನ್ನು ಬಿಟ್ಟುಕೊಡುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ. 

ಈ ಹಿಂದಿನ ಲೆಕ್ಕಾಚಾರಗಳ ಪ್ರಕಾರ ದೆಹಲಿಯಲ್ಲಿ ಆಪ್ ಮತ್ತು ಕಾಂಗ್ರೆಸ್ ನಡುವೆ ಕನಿಷ್ಟ 3-4 ಸ್ಥಾನಗಳಲ್ಲಿ ಹೊಂದಾಣಿಕೆಯಾಗುವ ಬಗ್ಗೆ ಮಾತುಕತೆ ನಡೆಯುತ್ತಿತ್ತು.  ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಗೆ ಯಾವುದೇ ಅರ್ಹತೆ ಇಲ್ಲದೇ ಇದ್ದರೂ ಮೈತ್ರಿ ಧರ್ಮ ಪಾಲನೆಗಾಗಿ ಕೇವಲ 1 ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದೆ. 

ಆಮ್ ಆದ್ಮಿ ಪಕ್ಷದ ಸಂಸದ ಸಂದೀಪ್ ಪಾಠಕ್, ಆಮ್ ಆದ್ಮಿ ಪಕ್ಷ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಇನ್ನೊಂದು ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್ ಗೆ ಬಿಟ್ಟುಕೊಡಲಿದೆ. ದೆಹಲಿಯ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈ ಹಿಂದಿನ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಗೆದ್ದಿಲ್ಲ. ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ನದ್ದು ಶೂನ್ಯ ಸಾಧನೆ. ಎಂಸಿಡಿಯಲ್ಲಿ 250 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಗೆದ್ದಿರುವುದು ಕೇವಲ 9 ಸ್ಥಾನಗಳನ್ನು ಮಾತ್ರ. ಈ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ, ಕಾಂಗ್ರೆಸ್ ಗೆ ಸೀಟು ಹಂಚಿಕೆಯಲ್ಲಿ ಒಂದೇ ಒಂದು ಸ್ಥಾನವನ್ನು ಪಡೆಯುವುದಕ್ಕೂ ಅರ್ಹತೆ ಇಲ್ಲ. ಆದರೆ ನಾವು ಮೈತ್ರಿ ಧರ್ಮ ಪಾಲನೆ ಮಾಡುವುದಕ್ಕಾಗಿ 1 ಸ್ಥಾನದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಮುಂದಾಗುತ್ತಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಪಾಠಕ್ ಹೇಳಿದ್ದಾರೆ.

ಇದೇ ವೇಳೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಬಗ್ಗೆಯೂ ಮಾತನಾಡುರುವ ಸಂದೀಪ್ ಪಾಠಕ್, ಶೀಘ್ರವೇ ದೆಹಲಿಯಲ್ಲಿ ಸಭೆ ನಡೆಯಲಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com