'ಇಂದು ನನ್ನ ಹೊಸ ರಾಜಕೀಯ ಜೀವನ ಆರಂಭ': ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಶೋಕ್ ಚವಾಣ್

ಕಾಂಗ್ರೆಸ್ ತೊರೆದ ಒಂದು ದಿನದ ನಂತರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಮಂಗಳವಾರ ಮುಂಬೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಅಶೋಕ್ ಚವಾಣ್
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಅಶೋಕ್ ಚವಾಣ್

ಮುಂಬೈ: ಕಾಂಗ್ರೆಸ್ ತೊರೆದ ಒಂದು ದಿನದ ನಂತರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಮಂಗಳವಾರ ಮುಂಬೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾಂಕುಲೆ, ಬಿಜೆಪಿ ಮುಂಬೈ ಪಕ್ಷದ ಘಟಕದ ಮುಖ್ಯಸ್ಥ ಆಶಿಶ್ ಶೇಲಾರ್ ಮತ್ತು ಸಂಪುಟ ಸಚಿವ ಗಿರೀಶ್ ಮಹಾಜನ್ ಅವರ ಸಮ್ಮುಖದಲ್ಲಿ ಚವಾಣ್ (65ವ) ಅವರು ಬಿಜೆಪಿಗೆ ಸೇರ್ಪಡೆಯಾದರು. 

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಚವಾಣ್, ಇಂದು ನನ್ನ ಹೊಸ ರಾಜಕೀಯ ಜೀವನ ಆರಂಭವಾಗಿದೆ ಎಂದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ಯಾವುದೇ ಕರೆಗಳು ಬಂದಿವೆಯೇ ಎಂಬ ಪ್ರಶ್ನೆಗೆ ಚವಾಣ್ ಉತ್ತರ ನೀಡದೆ ನುಣುಚಿಕೊಂಡರು. 

ಮಾಜಿ ಸಿಎಂ ಎಸ್ ಬಿ ಚವಾಣ್ ಅವರ ಪುತ್ರ ಅಶೋಕ್ ಚವಾಣ್ ಅವರು ನಿನ್ನೆ ಕಾಂಗ್ರೆಸ್ ನಿಂದ ಹೊರಹೋಗುವ ಮುನ್ನ ಪ್ರತಿಕ್ರಿಯೆ ನೀಡಿ, ತಮ್ಮ ಆಯ್ಕೆ ಸ್ವತಂತ್ರವಾಗಿದೆ ಎಂದಷ್ಟೇ ಹೇಳಿ ಕಾಂಗ್ರೆಸ್ ತೊರೆಯಲು ನಿರ್ದಿಷ್ಟ ಕಾರಣಗಳನ್ನು ನೀಡಿರಲಿಲ್ಲ. 

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಅವರು ಪಕ್ಷವನ್ನು ತೊರೆದ ಕೆಲವು ದಿನಗಳ ನಂತರ ಅಶೋಕ್ ಚವಾಣ್ ಕೂಡ ಕೈ ಪಕ್ಷ ತೊರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com