ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!

ಮೂಲಗಳ ಪ್ರಕಾರ, ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನದ ನಂತರ ಆಯ್ಕೆ ಸಮಿತಿಯು ಉನ್ನತ ಹುದ್ದೆಗೆ ಮೂರು ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡುತ್ತದೆ.
Ram temple
ಅಯೋಧ್ಯೆ ರಾಮ ಮಂದಿರ
Updated on

ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ನೇಮಕ ಮಾಡುವ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿಗಳು ಬಂದಿದ್ದು, ಈ ಪೈಕಿ ಕೇವಲ 20 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಬಲ್ಲ ಮೂಲಗಳ ಪ್ರಕಾರ, ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನದ ನಂತರ ಆಯ್ಕೆ ಸಮಿತಿಯು ಉನ್ನತ ಹುದ್ದೆಗೆ ಮೂರು ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡುತ್ತದೆ. ಸಿಇಒ ಆಗಿ ನೇಮಕಗೊಂಡ ವ್ಯಕ್ತಿಯು ಶ್ರೀ ರಾಮ ದೇವಾಲಯ ವ್ಯವಹಾರಗಳ ಒಟ್ಟಾರೆ ನಿರ್ವಹಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಸೆಪ್ಟೆಂಬರ್ 2 ರಂದು ಟ್ರಸ್ಟ್ ಹೊಸ ಸಿಇಒ ನೇಮಕ ಮಾಡುವುದಾಗಿ ಮತ್ತು ಈ ಸಂಬಂಧ ಆಯ್ಕೆ ಸಮಿತಿ ರಚಿಸುವುದಾಗಿ ಘೋಷಿಸಿತ್ತು. ಬಳಿಕ ಟ್ರಸ್ಟ್ ಸಿಇಒ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತು.

Ram temple
Watch | ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ; ಖರ್ಗೆ-ರಿಜಿಜು ವಾಗ್ವಾದ!

ಗಮನಾರ್ಹವಾಗಿ, ಕಳೆದ ತಿಂಗಳು ಟ್ರಸ್ಟ್ ಸಿಇಒ ಹುದ್ದೆಗೆ ಸುಮಾರು 5,200 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ಪರಿಶೀಲನೆಯ ನಂತರ, ಆಯ್ಕೆ ಸಮಿತಿಯು ಇತ್ತೀಚೆಗೆ ಸುಮಾರು 55 ಅಭ್ಯರ್ಥಿಗಳೊಂದಿಗೆ ಪ್ರಾಥಮಿಕ ಸಂದರ್ಶನ ನಡೆಸಿತ್ತು.

ಆರಂಭಿಕ ಸ್ಕ್ರೀನಿಂಗ್ ನಂತರ, ಮುಂದಿನ ಸುತ್ತಿಗೆ ಸುಮಾರು 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮೂಲಗಳು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂಖ್ಯೆ 20ಕ್ಕೆ ಹತ್ತಿರದಲ್ಲಿದೆ ಎಂದು ತಿಳಿಸಿವೆ. ಆದರೆ ನಿಖರವಾದ ಅಂಕಿ ಅಂಶವನ್ನು ಬಹಿರಂಗಪಡಿಸಿಲ್ಲ.

ಸಂದರ್ಶನ ನಡೆಸಲು ಮೂವರು ಸದಸ್ಯರ ಸಮಿತಿ

ಇನ್ನೂ ತೀರ್ಥಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಲು ಮೂವರು ಸದಸ್ಯರ ಸಮಿತಿಯನ್ನ ರಚನೆ ಮಾಡಲಾಗಿದೆ. ಸಂದರ್ಶನ ಸಮಿತಿಯಲ್ಲಿ ಮಾಜಿ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಷ್ಣುಕಾಂತ್ ಚತುರ್ವೇದಿ ಮತ್ತು ಈ ಹಿಂದೆ ಶಿರಡಿ ಸಾಯಿ ಬಾಬಾ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿಜ್ಞಾನಿ ಸುರೇಶ್ ಅವರು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com