ಭಾರತದ ರಕ್ಷಣಾ ರಫ್ತು 38,424 ಕೋಟಿ ರೂ ಗೆ ಏರಿಕೆ: ರಾಜನಾಥ್ ಸಿಂಗ್

"ನಮ್ಮ ಪ್ರಯತ್ನಗಳು ರಕ್ಷಣಾ ಉತ್ಪಾದನೆಗೆ ಹೊಸ ದಿಕ್ಕನ್ನು ನೀಡಿವೆ. ನಾವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ ಮತ್ತು ಸ್ಥಳೀಯ ಉತ್ಪಾದನೆಗೆ ಅಭೂತಪೂರ್ವ ಆವೇಗವನ್ನು ಒದಗಿಸಿದ್ದೇವೆ" ಎಂದು ಅವರು ಹೇಳಿದರು.
Rajanath Singh
ರಕ್ಷಣಾ ಸಚಿವ ರಾಜನಾಥ್ ಸಿಂಗ್ online desk
Updated on

ನವದೆಹಲಿ: ಭಾರತ ಜಾಗತಿಕ ರಕ್ಷಣಾ ಉತ್ಪಾದನೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. 2025-26ರಲ್ಲಿ ಮಿಲಿಟರಿ ಹಾರ್ಡ್‌ವೇರ್ ರಫ್ತು 38,424 ಕೋಟಿ ರೂಪಾಯಿಗಳಿಗೆ ಏರಿದ್ದು, ಸ್ಥಳೀಯ ಉತ್ಪಾದನೆಗೆ ಗಮನಾರ್ಹ ಒತ್ತು ನೀಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸಶಸ್ತ್ರ ಪಡೆಗಳಿಗೆ ನೀಡಿದ ಸಂದೇಶದಲ್ಲಿ, ಸರ್ಕಾರ ಮಿಲಿಟರಿಯನ್ನು ಆಧುನೀಕರಿಸಲು ದೃಢನಿಶ್ಚಯ ಹೊಂದಿರುವುದರಿಂದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಕಳೆದ ಒಂದು ವರ್ಷದಲ್ಲಿ ರೂ. 8.75 ಲಕ್ಷ ಕೋಟಿಗಿಂತ ಹೆಚ್ಚಿನ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ಸಿಂಗ್ ಹೇಳಿದರು.

"ಭಾರತ ಇನ್ನು ಮುಂದೆ ತನ್ನದೇ ಆದ ಭದ್ರತಾ ಅಗತ್ಯಗಳನ್ನು ಮಾತ್ರ ಪೂರೈಸುವ ದೇಶವಲ್ಲ; ಬದಲಾಗಿ, ನಾವು ಜಾಗತಿಕ ರಕ್ಷಣಾ ಉತ್ಪಾದನೆ ಮತ್ತು ರಕ್ಷಣಾ ರಫ್ತು ಕ್ಷೇತ್ರದಲ್ಲಿ ಉದಯೋನ್ಮುಖ ಶಕ್ತಿಯಾಗಿದ್ದೇವೆ" ಎಂದು ಅವರು ಹೇಳಿದರು.

Rajanath Singh
ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!

"ನಮ್ಮ ಪ್ರಯತ್ನಗಳು ರಕ್ಷಣಾ ಉತ್ಪಾದನೆಗೆ ಹೊಸ ದಿಕ್ಕನ್ನು ನೀಡಿವೆ. ನಾವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ ಮತ್ತು ಸ್ಥಳೀಯ ಉತ್ಪಾದನೆಗೆ ಅಭೂತಪೂರ್ವ ಆವೇಗವನ್ನು ಒದಗಿಸಿದ್ದೇವೆ" ಎಂದು ಅವರು ಹೇಳಿದರು.

ಸಶಸ್ತ್ರ ಪಡೆಗಳ ಆಧುನೀಕರಣದ ಜೊತೆಗೆ, ಗಡಿ ಪ್ರದೇಶಗಳನ್ನು ಬಲಪಡಿಸುವುದು ಸಹ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

"ರಕ್ಷಣಾ ವಲಯದಲ್ಲಿ, ಭಾರತದ ಸ್ವಾವಲಂಬನೆಗೆ ಅತ್ಯಂತ ಪ್ರಭಾವಶಾಲಿ ಪುರಾವೆಯೆಂದರೆ ನಮ್ಮ ರಕ್ಷಣಾ ರಫ್ತುಗಳು. 2013-14ರಲ್ಲಿ ಕೇವಲ 686 ಕೋಟಿ ರೂ.ಗಳಷ್ಟಿದ್ದ ರಕ್ಷಣಾ ರಫ್ತು, ಈಗ 2025-26ರ ಆರ್ಥಿಕ ವರ್ಷದಲ್ಲಿ 38,424 ಕೋಟಿ ರೂ.ಗಳಿಗೆ ತಲುಪಿದೆ" ಎಂದು ಅವರು ಹೇಳಿದರು.

"ಅಂದರೆ, ಸುಮಾರು ಒಂದು ದಶಕದಲ್ಲಿ, ನಮ್ಮ ರಕ್ಷಣಾ ರಫ್ತು ಶೇಕಡಾ 5,500 ಕ್ಕಿಂತ ಹೆಚ್ಚು ಜಿಗಿತವನ್ನು ಕಂಡಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com