ನಿಜವಾದ ಹಿಂದೂ ಎಲ್ಲರನ್ನೂ ಸಮಾನವಾಗಿ ನೋಡ್ತಾರೆ: ಕೆ. ಅಣ್ಣಾಮಲೈ

ಕೊಯಮತ್ತೂರು ಬಳಿಯ ಪೊಲ್ಲಾಚಿಯಲ್ಲಿ ತಮ್ಮ ಪ್ರತಿಷ್ಠಾನದ ಮೊದಲ ಮಾದಕ ದ್ರವ್ಯ ವಿರೋಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ತಾವು ಹೆಮ್ಮೆಯ ರಾಷ್ಟ್ರೀಯವಾದಿ ಮತ್ತು ಭಾರತೀಯ ಎಂದು ಹೇಳಿಕೊಂಡರು.
Annamalai
ಕೆ. ಅಣ್ಣಾಮಲೈ
Updated on

ಕೊಯಮತ್ತೂರು: ನಿಜವಾದ ಹಿಂದೂ ಎಲ್ಲರನ್ನೂ ಸಮಾನವಾಗಿ ನೋಡ್ತಾರೆ. ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಯಾರನ್ನೂ ಮೇಲು ಅಥವಾ ಕೀಳು ಎಂದು ಪರಿಗಣಿಸುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಭಾನುವಾರ ಪ್ರತಿಪಾದಿಸಿದರು.

ಕೊಯಮತ್ತೂರು ಬಳಿಯ ಪೊಲ್ಲಾಚಿಯಲ್ಲಿ ತಮ್ಮ ಪ್ರತಿಷ್ಠಾನದ ಮೊದಲ ಮಾದಕ ದ್ರವ್ಯ ವಿರೋಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ತಾವು ಹೆಮ್ಮೆಯ ರಾಷ್ಟ್ರೀಯವಾದಿ ಮತ್ತು ಭಾರತೀಯ ಎಂದು ಹೇಳಿಕೊಂಡರು.

ಆದರೆ, ಹೊರಬಂದಾಗ, ತಮ್ಮ ಜಾತಿ ಮತ್ತು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಬರುತ್ತೇನೆ. ಪ್ರತಿ ಬಾರಿಯೂ ಧರ್ಮವನ್ನು ಎತ್ತಿ ತೋರಿಸುವ ಮತ್ತು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ, 39 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಡಳಿತದಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಅದೇ ರೀತಿ 2031 ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಗಳು ಬರಲಿರುವಾಗ, ಅಂತಹ ಚಿಕ್ಕ ವಯಸ್ಸಿನ ಯುವಕರು ಬಹಳ ದೊಡ್ಡ ಆಡಳಿತ ಬದಲಾವಣೆಯನ್ನು ತರುತ್ತಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com