ಉಕ್ರೇನ್ ಮೇಲೆ ರಷ್ಯಾ ನ್ಯೂಕ್ಲಿಯರ್ ಬಾಂಬ್ ದಾಳಿ ನಡೆಸದಂತೆ ತಡೆದದ್ದು ಮೋದಿ: ಹೀಗೆ ಹೇಳಿದ್ದು ಯಾರು ಗೊತ್ತಾ?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು "ಪ್ರಧಾನಿ ಮೋದಿ ಅವರು ಹೇಳುವುದನ್ನು ನಿಜವಾಗಿಯೂ ಗಂಭೀರವಾಗಿ ಪರಿಗಣಿಸುತ್ತಾರೆ" ಎಂದು ಅವರು ಹೇಳಿದ್ದಾರೆ.
Narendra Modi-Putin
ನರೇಂದ್ರ ಮೋದಿ-ಪುಟಿನ್
Updated on

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದ ಪೋಲೆಂಡ್, 2022 ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಮೇಲೆ ಪರಮಾಣು ಬಾಂಬ್ ದಾಳಿ ನಡೆಸುವುದನ್ನು ತಡೆದಿದ್ದಾರೆ ಎಂದು ಪ್ರಶಂಸಿಸಿದೆ.

ಭಾರತಕ್ಕೆ ಭೇಟಿ ನೀಡಿರುವ ಪೋಲೆಂಡ್ ವಿದೇಶಾಂಗ ಕಾರ್ಯದರ್ಶಿ ವ್ಲಾಡಿಸ್ಲಾ ಟಿ ಬಾರ್ಟೋಸ್ಜೆವ್ಸ್ಕಿ ಮಂಗಳವಾರ, ಪುಟಿನ್ ಅವರು ಗಂಭೀರವಾಗಿ ಪರಿಗಣಿಸುವ ಕೆಲವೇ ಕೆಲವು ವಿಶ್ವ ನಾಯಕರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬರು ಎಂದು ಹೇಳಿದ್ದಾರೆ.

ದೀರ್ಘಕಾಲದ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತದ ಪಾತ್ರವನ್ನು ಪೋಲೆಂಡ್ ಹೇಗೆ ನೋಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ, ಬಾರ್ಟೋಸ್ಜೆವ್ಸ್ಕಿ, "ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಪ್ರಸಿದ್ಧ ರಾಜಕಾರಣಿ, ಅವರು ಬಹಳ ಗೌರವಾನ್ವಿತರು ಮತ್ತು ಭಾರತವು ರಷ್ಯಾದ ಒಕ್ಕೂಟದೊಂದಿಗೆ ಮತ್ತು ಅದಕ್ಕೂ ಮೊದಲು, ಅಲಿಪ್ತ ರಾಷ್ಟ್ರವಾಗಿ ಸೋವಿಯತ್ ಒಕ್ಕೂಟದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ" ಎಂದು ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು "ಪ್ರಧಾನಿ ಮೋದಿ ಅವರು ಹೇಳುವುದನ್ನು ನಿಜವಾಗಿಯೂ ಗಂಭೀರವಾಗಿ ಪರಿಗಣಿಸುತ್ತಾರೆ" ಎಂದು ಅವರು ಹೇಳಿದ್ದಾರೆ.

Narendra Modi-Putin
ಚೀನಾ ನಿಗ್ರಹಕ್ಕೆ ತಂತ್ರ: ಆಸ್ಟ್ರೇಲಿಯಾ ಜೊತೆ ಯುರೇನಿಯಂ ಒಪ್ಪಂದಕ್ಕೆ ಮೋದಿ ಸಹಿ!

2022ರ ಅಂತ್ಯದ ಬೆಳವಣಿಗೆಗಳನ್ನು ಉಲ್ಲೇಖಿಸುತ್ತಾ, "ಯುದ್ಧದ ಸಮಯದಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ರಷ್ಯಾವನ್ನು ಮನವೊಲಿಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಾರ್ಟೋಸ್ಜೆವ್ಸ್ಕಿ ಹೇಳಿದ್ದಾರೆ.

ಪೋಲಿಷ್ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಷ್ಯಾದ ಅಧ್ಯಕ್ಷರ ಮೇಲೆ ಪ್ರಭಾವ ಬೀರುವ ಬೆರಳೆಣಿಕೆಯ ನಾಯಕರಲ್ಲಿ ಮೋದಿ ಕೂಡ ಒಬ್ಬರು ಎಂದು ತಿಳಿಸಿದ್ದಾರೆ.

"ಅಧ್ಯಕ್ಷ ಪುಟಿನ್ ಮೇಲೆ ವಾಸ್ತವವಾಗಿ ಒತ್ತಡ ಮತ್ತು ಪ್ರಭಾವ ಬೀರಬಲ್ಲ ಕೆಲವೇ ಜನರಲ್ಲಿ ಪ್ರಧಾನಿ ಮೋದಿ ಒಬ್ಬರು. ಈ ಸಂಘರ್ಷವನ್ನು ನಿಲ್ಲಿಸಲು ಭಾರತವು ಸಹಾಯ ಮಾಡುವ ಸಾಧ್ಯತೆ ಸ್ಪಷ್ಟವಾಗಿಯೇ ಇದೆ" ಎಂದು ಬಾರ್ಟೋಸ್ಜೆವ್ಸ್ಕಿ ಹೇಳಿದ್ದಾರೆ. ಅಲ್ಲದೆ ಅವರು ಭಾರತದ ಬಳಿಕ ಮಾಸ್ಕೋದಲ್ಲಿ ಹೆಚ್ಚು ಚರ್ಚೆಗೊಳಪಡುವ ದೇಶ ಚೀನಾ ಎಂದೂ ಹೇಳಿದ್ದಾರೆ.

"ಪ್ರಧಾನಿ ಮೋದಿ ಜೊತೆಗಿನ ಭಾರತ ಮಾತ್ರವಲ್ಲದೆ ಚೀನಾದ ಕ್ಸಿ ಜಿನ್‌ಪಿಂಗ್ ಕೂಡ ಉದ್ವಿಗ್ನತೆಯನ್ನು ವಿರೋಧಿಸುತ್ತಿದ್ದಾರೆ. ವಿಶೇಷವಾಗಿ ರಷ್ಯಾಕ್ಕೆ ಪ್ರತಿಕೂಲವೆಂದು ಪರಿಗಣಿಸದ ದೇಶಗಳಿಂದ ಬಂದಾಗ, ಇಲ್ಲಿ ಭಾರತದ ಪಾತ್ರ ನಿರ್ಣಾಯಕವಾಗಿದೆ" ಎಂದು ಪೋಲೆಂಡ್‌ ವಿದೇಶಾಂಗ ಸಚಿವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com