NEET UG 2026: 'ಲೀಕ್' ತಡೆಯಲು ಮರು ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಮ್ ಆ್ಯಪ್ ನಿಷೇಧ; ಇಲ್ಲಿದೆ ಕಾರಣ...

ಭಾರತದಲ್ಲಿ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Telegram temporarily banned in India till June 22
ಟೆಲಿಗ್ರಾಮ್ Photo | Pexels
Updated on

ನವದೆಹಲಿ: NEET UG 2026 ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಇದೀಗ ಮರುಪರೀಕ್ಷೆ ನಡೆಸುವ ಮುನ್ನ ಸೋರಿಕೆ ತಡೆಯಲು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಏಕೆಂದರೆ ಈ ಅಪ್ಲಿಕೇಶನ್‌ನಿಂದಲೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳಿವೆ.

ಟೆಲಿಗ್ರಾಮ್ ಆ್ಯಪ್ ನಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳು, ಎಡಿಟೆಡ್ ಸ್ಕ್ರೀನ್‌ಶಾಟ್‌ಗಳು ಮತ್ತು ಪರೀಕ್ಷೆಗೆ ಪ್ರವೇಶ ಖಾತರಿಯ ಭರವಸೆಗಳೊಂದಿಗೆ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನು ಕ್ರಮ ಕೈಗೊಳ್ಳಲಾಗಿದೆ?

ಈ ಸಂಬಂಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎರಡು ಪ್ರತ್ಯೇಕ ನಿರ್ದೇಶನಗಳನ್ನು ನೀಡಿದೆ.

ಮೊದಲನೆಯದು ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿರ್ಬಂಧಿಸಲಾಗಿದೆ. ಇದು ಪರೀಕ್ಷಾ ಅವಧಿ ಮತ್ತು ಅದರ ತಕ್ಷಣದ ಪರಿಣಾಮಗಳನ್ನು ಒಳಗೊಂಡಿದೆ.

ಎರಡನೆಯದು ಜೂನ್ 30 ರವರೆಗೆ ಭಾರತದಲ್ಲಿ ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳ ಎಡಿಟ್ ಅನ್ನು ಟೆಲಿಗ್ರಾಮ್ ನಿಷ್ಕ್ರಿಯಗೊಳಿಸಬೇಕೆಂದು ಸೂಚಿಸಿದೆ.

Telegram temporarily banned in India till June 22
ನೀಟ್ ಮರುಪರೀಕ್ಷೆ: ಮಿಲಿಟರಿ ದರ್ಜೆಯ ಭದ್ರತೆಯಿಂದ ಒತ್ತಡ ಹೆಚ್ಚಳ, ಹೊಸ ಸಮಸ್ಯೆ ಸೃಷ್ಟಿ; ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ

ಟೆಲಿಗ್ರಾಮ್ ಪರಿಶೀಲನೆಗೆ ಒಳಪಟ್ಟಿದ್ದು ಏಕೆ?

NTA ಪ್ರಕಾರ, ಸಂಘಟಿತ ವಂಚನೆ ಮತ್ತು ಸೈಬರ್ ವಂಚನೆ ಜಾಲಗಳು ಈ ಟೆಲಿಗ್ರಾಮ್ ಅನ್ನು ಬಳಸುತ್ತಿವೆ ಎಂಬ ಆರೋಪಗಳ ನಂತರ ಇದರ ಮೇಲೆ ತಿಂಗಳುಗಟ್ಟಲೆ ನಿಗಾ ವಹಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

"ಪೇಪರ್ ಲೀಕ್ಡ್ ನೀಟ್", "ರೀ-ನೀಟ್ 2026", "ಖಾಸಗಿ ಮಾಫಿಯಾ" ಮತ್ತು "ರೀ ನೀಟ್ ಮಾಫಿಯಾ" ಮುಂತಾದ ಹೆಸರುಗಳನ್ನು ಹೊಂದಿರುವ ಚಾನೆಲ್‌ಗಳು ಪರೀಕ್ಷಾ ಪತ್ರಿಕೆಗೆ ಪ್ರವೇಶವನ್ನು ಬಹಿರಂಗವಾಗಿ ಜಾಹೀರಾತು ಮಾಡಿ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳಿಂದ ಸಾವಿರ ರೂಪಾಯಿಗಳಿಂದ ಲಕ್ಷ ರೂಪಾಯಿಗಳವರೆಗೆ ಪಾವತಿ ಮಾಡುವಂತೆ ಕೋರಿವೆ ಎಂದು ಎನ್ ಟಿಎ ತಿಳಿಸಿದೆ.

ಸುರಕ್ಷಿತ ಪರೀಕ್ಷಾ ಪ್ರಕ್ರಿಯೆಯ ಹೊರಗೆ ಅಂತಹ ಯಾವುದೇ ಪತ್ರಿಕೆ ಅಸ್ತಿತ್ವದಲ್ಲಿಲ್ಲ ಎಂದು NTA ಪುನರುಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com