ನವದೆಹಲಿ: ಸ್ವಿಸ್ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕಪ್ಪು ಹಣ ಇಟ್ಟಿರುವ ಭಾರತೀಯರು ಕಪ್ಪು ಹಣದ ಕಾನೂನಿನಡಿ ಕಠಿಣ ದಂಡನೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.
ಸ್ವಿಡ್ಜರ್ಲ್ಯಾಂಡ್ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳಂತೆ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣದ ಪ್ರಮಾಣ 2017ರಲ್ಲಿ ಶೇ. 50 ರಷ್ಟು ಹೆಚ್ಚಳವಾಗಿದೆ.ಸಿಎಚ್ಎಫ್ 1.01 ಶತಕೋಟಿ (7,000 ಕೋಟಿ ರೂ.) ಹೆಚ್ಚಳವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿತ್ತಿತ್ತು. ಆದರೆ ಈ ವರ್ಷ ಮತ್ತೆ ಏರಿಕೆ ಕಂಡಿದ್ದು ಸಾಗರೋತ್ತರ ನಾಗರಿಕರು.ತಮ್ಮ ಅಕ್ರಮ ಹಣವನ್ನು ಇಲ್ಲಿ ಠೇವಣಿಯಾಗಿರಿಸಿದ್ದಾರೆ ಎನ್ನಲಾಗುತ್ತಿದೆ.
"ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರ ಹಣದ ಪ್ರಮಾಣ ಹೆಚ್ಚಳವಾಗಿದೆ ಎನ್ನುವ ಸುದ್ದಿ ಇತ್ತೀಚೆಗೆ ಮಾದ್ಯ್ಮದಲ್ಲಿ ವರದಿಯಾಗಿದ್ದು ಕೇಂದ್ರ ಸರ್ಕಾರದ ಕಪ್ಪು ಹಣ ವಿರೋಧಿ ಕ್ರಮದ ಫಲಶ್ರುತಿ ಇದಾಗಿದೆ ಎನ್ನುವ ತಪ್ಪು ಹೇಳಿಕೆಗಳು ಕೇಳಿಬರುತ್ತಿದೆ" ಜೇಟ್ಲಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಹಣಕಾಸಿನ ಕುರಿತ ಮಾಹಿತಿ ಬಹಿರಂಗಪಡಿಸುವಲ್ಲಿ ಸ್ವಿಡ್ಜರ್ಲ್ಯಾಂಡ್ ಸದಾ ಹಿಂದೆ ಇದೆ ಎಂದು ಭಾವಿಸಿದ ಜೇಟ್ಲಿ ಭಾರತ ಸೇರಿ ಜಾಗತಿಕ ಒತಡಕ್ಕೆ ಮಣಿದಿರುವ ರಾಷ್ಟ್ರ ಇತ್ತೀಚೆಗೆ ತಾನು ಕೆಲ ಕಾನೂನು ತಿದ್ದುಪಡಿ ಮಾಡಿಕೊಂಡಿದೆ.ಭಾರತದೊಡನೆ ಒಪ್ಪಂದ ಸಹ ಮಾಡಿಕೊಂಡಿರುವ ಆ ರಾಷ್ಟ್ರಭಾರತೀಯರಿಗೆ ಸಂಬಂಧಿಸಿದ ಹಣಕಾಸು ಮಾಹಿತಿಯ ನೈಜ ಚಿತ್ರಣ ಒದಗಿಸಲಿದೆ. ಈ ಮಾಹಿತಿಯ ಹರಿವು ಜನವರಿ 2019ರಿಂದ ಪ್ರಾರಂಭವಾಗಲಿದೆ. ಹೀಗಾಗಿ ಯಾವುದೇ ಕಾನೂನು ಬಾಹಿರ ಠೇವಣಿದಾರರೌ ಅವರ ಹೆಸರು ಬಹಿರಂಗಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದರೆ ಭಾರತದಲ್ಲಿ ಕಪ್ಪು ಹಣ ಕಾನೂನಿನ ಕಠಿಣ ಶಿಕ್ಷೆಯ ನಿಬಂಧನೆಗೆ ಅವರು ಒಳಗಾಗುತ್ತಾರೆ. ಎಂದು ಅವರು ಹೇಳಿದರು.
ಅಲ್ಲದೆ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುವವರು ಮೊದಲಿಗೆ ಈ ಕುರಿತ ಅಗತ್ಯ ಮೂಲಭೂತ ಮಾಹಿತಿ ತಿಳಿದಿರಬೇಕು. ಎಂದ ಜೇಟ್ಲಿ ಈ ಎಲ್ಲಾ ಹಣವೂ ತೆರಿಗೆ ಹೊರತಾದ ಹಣ, ಸ್ವಿಸ್ ಬ್ಯಾಂಕ್ ನ ವಿಚಾರದಲ್ಲಿ ನಾವು ಭಾವಿಸಿರುವಂತೆ ಅಲ್ಲಿರುವುದೆಲ್ಲ ಅಕ್ರಮ ಠೇವಣಿಗಳಾಗಿರುತ್ತದೆ, ಹೀಗೆಂದು ದರ್ಶಕಗಳಿಂದಲೂ ನಾವು ಕಂಡುಕೊಳ್ಳುತ್ತಾ ಬಂದಿದ್ದೇವೆ. ಆದರೆ ತೆರಿಗೆ ಇಲಾಖೆಯ ಈ ಹಿಂದಿನ ತನಿಖೆಯಲ್ಲಿ ತಿಳಿದು ಬಂದಂತೆ ಇದುಅನಿವಾಸಿ ಭಾರತೀಯರ ಹಣವಾಗಿದೆ.ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಉದಾರವಾದಿ ವರ್ಗಾವಣೆ ಯೊಜನೆಯಡಿಯಲ್ಲಿ ಹಣ ವರ್ಗಾವಣೆ ಸೇರಿದಂತೆ, ವಿದೇಶದಲ್ಲಿ ಕಾನೂನುಬದ್ಧ ಹೂಡಿಕೆ ಮಾಡಿದ ಭಾರತೀಯರ ಹಣವೂ ಸಹ ಸ್ವಿಸ್ ಬ್ಯಾಂಕ್ ನಲ್ಲಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಜೇಟ್ಲಿ ಸಧ್ಯ ಯಾವ ಖಾತೆಯ ಹೊಣೆಗಾರಿಕೆ ಇಲ್ಲದ ಸಚಿವರಾಗಿದ್ದಾರೆ. ಮೋದಿ ಸರ್ಕಾರವು ತೆರಿಗೆ ಆದಾಯವನ್ನು ಹೆಚ್ಚಿಸಲು ಬಹುಪಯೋಗಿ ತಂತ್ರಗಳಿಗೆ ಮುಂದಾಗಿದೆ ಎಂದು ಹೇಲುವ ಜೇಟ್ಲಿ ಕಪ್ಪ್ಪು ಹಣವನ್ನು ಬಹಿರಂಗಪಡಿಸಲು ವಿವಿಧ ರೀತಿಯ ತಂತ್ರಗಳನ್ನು ಬಳಸಲಾಗುತ್ತದೆ ಎಂದರು.
ಈ ವರ್ಷದ ಮೊದಲ ತ್ರೈಮಾಸಿಕದಲ್ಲ್ಲಿ ವೈಯುಕ್ತಿಕ ತೆರಿಗೆ ವಿಭಾಗದ ಮುಂಗಡ ತೆರಿಗೆ ಪಾವತಿಯಲ್ಲಿ 44 ಶೇ. ಹಾಗೂ ಕಾರ್ಪೋರೇಟ್ ತೆರಿಗೆ ಪಾವತಿಯಲ್ಲಿ ಶೇ .17 ಏರಿಕೆ ದಾಖಲಾಗಿದೆ.
ಸರ್ಕಾರ ತೆಗೆದುಕೊಂಡ ಕ್ರಮದ ಪರಿಣಾಮ 2017-18ರಲ್ಲಿ ಒಟ್ಟು ಆದಾಯ ತೆರಿಗೆ ಸಂಗ್ರಹ 10.02 ಲಕ್ಷ ಕೋಟಿ ರು. ಆಗಿದ್ದು ನಾಲ್ಕು ವರ್ಷಗಳಲ್ಲಿ ಶೇ.57ರಷ್ಟು ಏರಿಕೆ ಕಂಡಿದೆ ಎಂದು ಅವರು ವಿವರಿಸಿದ್ದಾರೆ.