Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Gautam Gambhir

ಮತ್ತೊಂದು ಬಿಜೆಪಿ ಪಟ್ಟಿ ಬಿಡುಗಡೆ: ಮಾಜಿ ಕ್ರಿಕೆಟಿಗ ಗಂಭೀರ್ ಸ್ಫರ್ಧೆ, ಎಲ್ಲಿಂದ ಸ್ಪರ್ಧೆ?

Sri Lanka declares emergency from midnight

ಶ್ರೀಲಂಕಾದಲ್ಲಿ 7 ಆತ್ಮಾಹುತಿ ಬಾಂಬ್ ದಾಳಿ: ತುರ್ತು ಪರಿಸ್ಥಿತಿ ಘೋಷಣೆ, ಸ್ಥಳೀಯರ ಕೈವಾಡ ಶಂಕೆ

Sri Lankan Muslims had warned intel about group behind Easter blasts

ಶ್ರೀಲಂಕಾ ಸ್ಫೋಟ: ಜಿಹಾದಿ ಸಂಘಟನೆ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದ ಸ್ಥಳೀಯ ಮುಸ್ಲಿಮರು!

India tells China to be sensitive to its concerns

ಚೀನಾ ನೆಲದಲ್ಲೇ ನಿಂತು, ಚೀನಾಗೇ ಎಚ್ಚರಿಕೆ ನೀಡಿದ ಭಾರತ!

Rahul Gandhi-Pankaja Munde

ಬಾಂಬ್ ಕಟ್ಟಿ ರಾಹುಲ್ ಗಾಂಧಿಯನ್ನು ಶತ್ರು ರಾಷ್ಟ್ರದಲ್ಲಿ ಉಡಾಯಿಸಬೇಕಿತ್ತು: ಪಂಕಜಾ ಮುಂಡೆ

Top Jaish-e-Mohammed commanders eliminated in targeted action by India

45 ದಿನಗಳಲ್ಲಿ ಪುಲ್ವಾಮ ಉಗ್ರ ದಾಳಿಯ ಇಡೀ ತಂಡವನ್ನೇ ಇನ್ನಿಲ್ಲವಾಗಿಸಿದ ಭಾರತ!

ಸಂಗ್ರಹ ಚಿತ್ರ

ಚಿತ್ರದುರ್ಗ: ನಿರಂತರ ಅತ್ಯಾಚಾರಗೈದು ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿ, ಶಿಶುವನ್ನು ಹೂತು ಹಾಕಿದ ಪಾಪಿ ತಂದೆ!

ಕಲ್ಲಡ ಬಸ್

ಇದು ಸರಿಯಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಪ್ರಯಾಣಿಕರ ಮೇಲೆ ಹಲ್ಲೆ: ಕಲ್ಲಡ ಟ್ರಾವೆಲ್ಸ್ ಸಿಬ್ಬಂದಿ ಬಂಧನ!

Lawyers want

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಫುಲ್ ಕೋರ್ಟ್ ಗೆ ವಕೀಲರ ಪಟ್ಟು!

Rahul Gandhi

'ಚೌಕೀಧಾರ್ ಚೋರ್' ಘೋಷಣೆ: ಕೋರ್ಟ್ ಆದೇಶ ತಪ್ಪಾಗಿ ಉಲ್ಲೇಖಿಸಿದ್ದಕ್ಕೆ 'ಸುಪ್ರೀಂ'ಗೆ ರಾಹುಲ್ 'ವಿಷಾದ'!

ಶಾರೂಕ್ ಖಾನ್-ಮೋದಿ

'ಕರೋ ಮತದಾನ್' ಜಾಗೃತಿ ವಿಡಿಯೋ: ಶಾರೂಕ್ ಖಾನ್‌ ಗೆ ಪ್ರಧಾನಿ ಮೋದಿ ಮೆಚ್ಚುಗೆ

Sonia wept for Batla House terrorists: Shah

'ಬಾಟ್ಲಾ ಹೌಸ್ ಎನ್ ಕೌಂಟರ್ ನಲ್ಲಿ ಸತ್ತ ಉಗ್ರರಿಗೆ ಸೋನಿಯಾ ಕಣ್ಣೀರು ಹಾಕಿದ್ದರು': ಅಮಿತ್ ಶಾ

Lok Sabha Elections 2019: Karnataka to vote for 14 constituencies in phase-2 tomorrow

ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: ಪ್ರಭಾವಿ ಅಭ್ಯರ್ಥಿಗಳಿಂದ ಚುನಾವಣಾ ಕಣಕ್ಕೆ ರಂಗು

ಮುಖಪುಟ >> ರಾಷ್ಟ್ರೀಯ

ಲೋಕಸಭೆಯಲ್ಲಿ ಆಪರೇಷನ್ ಕಮಲ ಪ್ರತಿಧ್ವನಿ: ಕಾಂಗ್ರೆಸ್ ನಿಂದ ಸ್ವಲ್ಪಕಾಲ ಸಭಾತ್ಯಾಗ

Loksabha

ಲೋಕಸಭೆ

ನವದೆಹಲಿ: ಕರ್ನಾಟಕದ ರಾಜಕೀಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಆಪರೇಷನ್ ಕಮಲದ ವಿಚಾರ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು.

ಆಡಿಯೋ ಟೇಪ್ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು ಆಡಳಿತಾರೂಢ ಸಮ್ಮಿಶ್ರದ ಸರ್ಕಾರದ ಶಾಸಕರನ್ನು ಖರೀದಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಈ ಆರೋಪವನ್ನು ಕೇಂದ್ರ ಸಚಿವ ಸದಾನಂದಗೌಡ ನಿರಾಕರಿಸಿದರು.

 ಈ ವಿಚಾರದಿಂದಾಗಿ  ಸೋನಿಯಾಗಾಂಧಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸ್ವಲ್ಪ ಕಾಲ ಸಭಾತ್ಯಾಗ ನಡೆಸಿದರು. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸದನಕ್ಕೆ ಆಗಮಿಸಿದರು.

ಶೂನ್ಯ ವೇಳೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಕ್ಲಿಪ್  ಬಗ್ಗೆ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರೇ ಕುದುರೆ ವ್ಯಾಪಾರಕ್ಕಿಳಿದಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಆಡಿಯೋ ಟೇಪ್ ನಲ್ಲಿ  ರಾಜ್ಯದಲ್ಲಿನ ಸ್ಪೀಕರ್ ಹಾಗೂ ಜಡ್ಜ್ ಅವರನ್ನು ನಿರ್ವಹಿಸುವುದಾಗಿ ಹೇಳಿರುವ ಅಂಶವಿದೆ ಎಂದು ಹೇಳಿದರು. ಖರ್ಗೆ ಅವರ ಹೇಳಿಕೆಗೆ ಸಚಿವ ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿದರು.ಈ ರೀತಿಯ ಆಪರೇಷನ್ ಕಮಲ ದೇಶದಲ್ಲಿ ನಡೆಯಬಾರದು ಎಂದು ಹೇಳಿದರು.

ಆದರೆ, ಇವರ ಹೇಳಿಕೆಯನ್ನು ನಿರಾಕರಿಸಿದ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಈಗಾಗಲೇ ಆಂತರಿಕ ಜಗಳ ಆರಂಭವಾಗಿದ್ದು, ಉಭಯ ಪಕ್ಷಗಳು ನಕಲಿ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ಥಾನವನ್ನು ಉಳಿಸಲು ಉಭಯ ಪಕ್ಷಗಳು ಈ ರೀತಿ ಮಾಡುತ್ತಿವೆ. ಕಾಂಗ್ರೆಸ್ ಮಾಡಿದ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು, ಸುಳ್ಳಿನಿಂದ ಕೂಡಿವೆ ಎಂದು ಹೇಳಿದರು.

ಆಪರೇಷನ್ ಕಮಲ, ಪ್ರಜಾಪ್ರಭುತ್ದದ ಹತ್ಯೆ ಮತ್ತಿತರ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು ಕೆಲಕಾಲ ಕಲಾಪಕ್ಕೆಅಡ್ಡಿಪಡಿಸಿದರು. ಆಂಧ್ರಪ್ರದೇಶದಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಟಿಡಿಪಿ ಸದಸ್ಯರು  ಘೋಷಣೆ ಕೂಗಿದರು.

ಸ್ಪೀಕರ್ ಸುಮಿತ್ರಾ ಮಹಾಜನ್ ಮನವಿ ಮಾಡಿದ್ದರೂ ಕಾಂಗ್ರೆಸ್ ಸದಸ್ಯರು ಕಿವಿಗೊಡಲಿಲ್ಲ. ಇದಕ್ಕೂ ಮುನ್ನಾ ಕರ್ನಾಟಕದಲ್ಲಿನ ಕುದುರೆ ವ್ಯಾಪಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಅವಧಿಯನ್ನು  ಸುಮಾರು 50 ನಿಮಿಷಗಳವರೆಗೂ ಮುಂದೂಡಲಾಗಿತ್ತು.
Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : politics, Loksabha, Audio Tape, Horse trading, BSYeddyurappa, Congress, ಲೋಕಸಭೆ, ಆಡಿಯೋ ಟೇಪ್, ಕುದುರೆ ವ್ಯಾಪಾರ, ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS