ದುರ್ಗಾ ಪೂಜೆಗೆ ಮಮತಾ ಬ್ಯಾನರ್ಜಿ ಗಿಫ್ಟ್: ಪ್ರತಿ ಪೂಜಾ ಸಮಿತಿಗೆ 10 ಸಾವಿರ ರೂ.!

Published: 12 Sep 2018 02:27 PM IST
ಮಮತಾ ಬ್ಯಾನರ್ಜಿ
ಕೊಲ್ಕತ್ತಾ :  2019 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃಧು ಹಿಂದುತ್ವ ಧೋರಣೆ  ತಾಳಿದ್ದು, ದುರ್ಗಾಪೂಜೆಗೆ  ಪ್ರತಿ ಪೂಜಾ ಸಮಿತಿಗೆ  ಭರ್ಜರಿ  10 ಸಾವಿರ ರೂ.  ಗಿಪ್ಟ್ ನೀಡುತ್ತಿದ್ದಾರೆ.

ಕೊಲ್ಕತ್ತಾದಲ್ಲಿ 3 ಸಾವಿರ ಸೇರಿದಂತೆ  ಸೇರಿದಂತೆ   ರಾಜ್ಯಾದ್ಯಂತ 28 ಸಾವಿರ  ದುರ್ಗಾ ಪೂಜಾ ಸಮಿತಿಗಳಿಗೆ  ಮಮತಾ ಬ್ಯಾನರ್ಜಿ ಕೊಡುಗೆ ನೀಡುತ್ತಿದ್ದಾರೆ.

ದುರ್ಗಾ ಪೂಜಾ ಸಮಿತಿಗಳಿಗೆ  ವಿದ್ಯುತ್ ಶುಲ್ಕದಲ್ಲಿ ಶೇ, 23 ರಷ್ಟು ರಿಯಾಯಿತಿ ನೀಡಲಾಗಿದೆ. ಇದು ಕಳೆದ ವರ್ಷ  ಶೇ. 20 ರಷ್ಟಿತ್ತು. ಕೊಲ್ಕತ್ತಾ ಮುನಿಷಿಪಲ್  ಕಾರ್ಪೋರೇಷನ್ ಹಾಗೂ ಅಗ್ನಿ ಶಾಮಕ ಇಲಾಖೆಯಿಂದ ಅನುಮತಿ ಪಡೆಯಲು  ಪಾವತಿಸಬೇಕಾದ ಶುಲ್ಕವನ್ನು ಸಹ ಮಮತಾ ಬ್ಯಾನರ್ಜಿ ಮನ್ನಾ ಮಾಡಿದ್ದಾರೆ.

ದುರ್ಗಾ ಪೂಜೆ ಸಂದರ್ಭದಲ್ಲಿ  ಶಾಂತಿ ಕಾಪಾಡಲು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿಯನ್ನು ದುರ್ಗಾ ಪೂಜಾ ಸಮಿತಿಯಲ್ಲಿ ರಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಮತಾ ಬ್ಯಾನರ್ಜಿ  ನಿರ್ದೇಶನ ನೀಡಿದ್ದಾರೆ.

ಕೆಲವರು ತಪ್ಪು ಮಾಹಿತಿ ನೀಡುವ ಮೂಲಕ ಕೋಮು ಹಿಂಸಾಚಾರ  ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆ ಇದ್ದು, ಅಂತಹ ಮಾಹಿತಿಗಳ ಬಗ್ಗೆ ನಿಗಾ ಇಡುವಂತೆ  ಮಮತಾ ಸೂಚಿಸಿದ್ದಾರೆ.

ಈ ಮಧ್ಯೆ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿನ್ಹಾ ಆರೋಪಿಸಿದ್ದು, ಕಳೆದ ವರ್ಷ ಮಮತಾ ಬ್ಯಾನರ್ಜಿ ಏನು ಮಾಡಿದ್ದರೂ ಎಂಬುದನ್ನು ಜನರು ಮರೆತಿಲ್ಲ, ಆಕೆಯನ್ನು ಕ್ಷಮಿಸುವುದು ಇಲ್ಲ ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳ ಮತಗಳು ಬಿಜೆಪಿಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಹೊಸ ಘೋಷಣೆಯನ್ನು ಹೊರಡಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ  ಶೇ, 68 ರಷ್ಟು ಮತದಾರರು ಗ್ರಾಮೀಣ ಪ್ರದೇಶದವರಾಗಿದ್ದು,  1990ರಿಂದಲೂ ರಾಜಕೀಯ ಇತಿಹಾಸ ಗಮನಿಸಿದ್ದರೆ  ಪಂಚಾಯತ್ ಚುನಾವಣೆಯೂ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. 2016ರಿಂದ ಪೈಪೋಟಿ ನೀಡುತ್ತಿರುವ ಬಿಜೆಪಿಯ ಭಯದಿಂದಾಗಿ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ ಎಂದು  ರಾಜಕೀಯ ತಜ್ಞ ಸುಖೇಂದು ಬ್ಯಾನರ್ಜಿ ಹೇಳುತ್ತಾರೆ.

ಪಶ್ಟಿಮ ಬಂಗಾಳದಲ್ಲಿ ಮುಸ್ಲಿಂರ ಸಂಖ್ಯೆಯಲ್ಲಿ ಹೆಚ್ಚಳ, ಬಾಂಗ್ಲಾದೇಶ ವಲಸಿಗರ ಒಳನುಸುಳುವಿಕೆ ದಾಳವನ್ನು ಪ್ರಯೋಗಿಸುತ್ತಿರುವ ಬಿಜೆಪಿ ಟಿಎಂಪಿ ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ. ಇದು ಕೂಡಾ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕರ ರಾಜೇಶ್ ಕಂಗ್ಸಾಬಾನಿಕ್ ಅಭಿಪ್ರಾಯಪಟ್ಟಿದ್ದಾರೆ.

Posted by: ABN | Source: The New Indian Express

ಈ ವಿಭಾಗದ ಇತರ ಸುದ್ದಿ