Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Complete confidence process today itself: Governor

ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ: ಸ್ಪೀಕರ್ ಗೆ ರಾಜ್ಯಪಾಲರ ಸಂದೇಶ

ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಪ್ರಕ್ರಿಯೆ ಜುಲೈ 31ರವರೆಗೆ ವಿಸ್ತರಣೆ, ಆಗಸ್ಟ್ 2ರಂದು ವಿಚಾರಣೆ

Saravana Bhavan Founder, Serving Life Term in Murder Case, Dies In Chennai Hospital

ಪೊಲೀಸರಿಗೆ ಶರಣಾಗಿದ್ದ ಶರವಣ ಭವನ್ ಮಾಲೀಕ ಪಿ ರಾಜಗೋಪಾಲ್ ಆಸ್ಪತ್ರೆಯಲ್ಲಿ ಸಾವು

Jai Shankar

ಕುಲಭೂಷಣ್ ಜಾಧವ್ ರನ್ನು ಕೂಡಲೇ ಬಿಡುಗಡೆ ಮಾಡಿ: ಪಾಕಿಸ್ತಾನಕ್ಕೆ ಭಾರತ ಒತ್ತಾಯ

ಹಿಮಾದಾಸ್, ಮುಹಮ್ಮದ್ ಅನಾಸ್

ಹದಿನೈದು ದಿನಗಳಲ್ಲಿ 4ನೇ ಸ್ವರ್ಣ ಗೆದ್ದ ಹಿಮಾದಾಸ್, ಅನಾಸ್‌ಗೆ ಅಗ್ರ ಸ್ಥಾನ

Congress, NCP MLAs to join BJP soon, claims Maharashtra BJP chief Patil

ಕಾಂಗ್ರೆಸ್, ಎನ್ ಸಿಪಿ ಶಾಸಕರು ಶೀಘ್ರ ಬಿಜೆಪಿ ಸೇರ್ಪಡೆ: ಮಹಾ ಬಿಜೆಪಿ ಮುಖ್ಯಸ್ಥ

CM Palaniswami announces Tenkasi, Chengalpet districts in Tamil Nadu, number up to 35

ತಮಿಳುನಾಡು: ಎರಡು ನೂತನ ಜಿಲ್ಲೆಗಳನ್ನು ಘೋಷಿಸಿದ ಸಿಎಂ ಪಳನಿಸ್ವಾಮಿ

Speaker Om Birla

'ಅಲ್ಲಿ ಹೋರಾಟ ಮಾಡಿ,ಇಲ್ಲಿ ಬೇಡ' ಕರ್ನಾಟಕ ಸಂಸದೆಗೆ ಲೋಕಸಭೆ ಸ್ಪೀಕರ್ ಸಲಹೆ

Princess Diana

ನಾನು ರಾಜಕುಮಾರಿ ಡಯಾನಾ ಪುನರ್ಜನ್ಮ: ಆಸ್ಟ್ರೇಲಿಯಾ ಬಾಲಕನ ವಿಚಿತ್ರ ಹೇಳಿಕೆಗೆ ಬೆಚ್ಚಿ ಬಿದ್ದ ಜಗತ್ತು

ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ

ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ

Rowdy sheeter arrested for killing five year old disabled boy in Bengaluru

ಬೆಂಗಳೂರು: 5 ವರ್ಷದ ಬಾಲಕನ ಕೊಲೆಗೆ ಅಪ್ಪನಿಂದಲೇ ಸುಪಾರಿ, ರೌಡಿ ಬಂಧನ

I-T attaches Rs 400 crore

ಐಟಿಯಿಂದ ಮಾಯಾವತಿ ಸಹೋದರಿನೆಗ ಸೇರಿದ 400 ಕೋಟಿ ರು. ಮೌಲ್ಯದ ಪ್ಲಾಟ್ ಜಪ್ತಿ

ಪಿಟಿ ಉಷಾ

ಭಾರತದ ಓಟದ ರಾಣಿ ಪಿಟಿ ಉಷಾಗೆ 'ವೆಟರನ್‌ ಪಿನ್‌' ಪುರಸ್ಕಾರ

ಮುಖಪುಟ >> ರಾಷ್ಟ್ರೀಯ

ಶತ್ರುಗಳನ್ನು ಹಿಮ್ಮೆಟ್ಟಿಸಲು ವಾಯುಪಡೆ ಸಾಮರ್ಥ್ಯ ಹೆಚ್ಚಿಸಬೇಕು: ವಾಯು ಸೇನಾ ಮುಖ್ಯಸ್ಥ

ಶತ್ರುರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ತಕ್ಕಂತೆ ಸೇನೆಯನ್ನು ಬಲಿಷ್ಟಗೊಳಿಸಬೇಕು, ಇದರಲ್ಲಿ ರಾಫೆಲ್ ಯುದ್ಧ ವಿಮಾನ ಕೂಡ ಇದೆ
Need to enhance IAF

ಸಂಗ್ರಹ ಚಿತ್ರ

ನವದೆಹಲಿ: ಬಾಹ್ಯ ಬೆದರಿಕೆ ಮತ್ತು ಶತ್ರು ಪಡೆಯ ಸೇನೆಯನ್ನು ಹಿಮ್ಮೆಟಿಸಲು ವಾಯು ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಹೇಳುವ ಮೂಲಕ ಭಾರತೀಯ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾ ಅವರು ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

 ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಾಯು ಸೇನೆಯ 'ಐಎಎಫ್ ಫೋರ್ಸ್ ಸ್ಟ್ರಕ್ಚರ್ 2035' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಧನೋವಾ ಅವರು, ಪ್ರಸ್ತುತ ಭಾರತ ಎದುರಿಸುತ್ತಿರುವ ಬಾಹ್ಯ ಅತಂಕಗಳಷ್ಟು ವಿಶ್ವದ ಇನ್ನಾವುದೇ ರಾಷ್ಟ್ರವೂ ಎದುರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯನ್ನು ಪರಿಸ್ಥಿತಿಗೆ ತಕ್ಕಂತೆ ಉನ್ನತೀಕರಿಸಬೇಕಿದೆ. ಪ್ರಸ್ತುತ ಪರಿಸ್ಥಿತಿ ನಾವು ತಿಳಿದಂತೆ ಸಾಮಾನ್ಯವಾಗಿ ಏನೂ ಇಲ್ಲ. ಎದುರಾಳಿಗಳ ಉದ್ದೇಶ ಮತ್ತು ಯೋಜನೆ ರಾತ್ರೋರಾತ್ರಿ ಬದಲಾಗಬಹುದು. ಹೀಗಾಗಿ ಯಾವುದೇ ರೀತಿಯ ಬಾಹ್ಯ ಆತಂಕಗಳಿಗೂ ನಾವು ಸಿದ್ಧರಾಗಿರಬೇಕು.  ಈ ನಿಟ್ಟಿನಲ್ಲಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿ ಬಲಿಷ್ಟಗೊಳಿಸಬೇಕು ಎಂದು ಹೇಳಿದ್ದಾರೆ.

ಏದುರಾಳಿಗಳ ಅಥವಾ ಶತ್ರುಪಡೆಯ ಸೇನೆಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಅಳವಡಿಸಿಕೊಂಡರೆ ಮಾತ್ರ ಅವುಗಳನ್ನು ಎದುರಿಸಬಹುದು ಎಂದು ಧನೋವಾ ಹೇಳಿದ್ದಾರೆ. ಅಂತೆಯೇ ಚೀನಾ ಮಿಲಿಟರಿ ಆಧುನೀಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಭಾರತದ ನೆರೆಯ ಎದುರಾಳಿ ಚೀನಾ ಎಂದಿಗೂ ತಟಸ್ಥವಾಗಿ ಕುಳಿತಿಲ್ಲ. ತನ್ನ ಸೇನೆಯನ್ನು ನಿರಂತರವಾಗಿ ಆಧುನೀಕರಿಸುತ್ತಿದೆ. ಅದರ ವಾಯು ಸೇನೆಯು ಆಧುನೀಕರಣದತ್ತ ದಾಪುಗಾಲಿರಿಸಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ನಮ್ಮ ಭಾರತೀಯ ವಾಯು ಸೇನೆಯನ್ನು ತಾಂತ್ರಿಕವಾಗಿ ಆಧುನೀಕರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಫೆಲ್ ಜೆಟ್ ಯುದ್ಧ ವಿಮಾನ ಒಪ್ಪಂದ ಮಾಡಿಕೊಂಡಿದ್ದು, ಎಸ್-400 ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ರಾಫೆಲ್ ಯುದ್ಧ ವಿಮಾನಗಳಿಗಿದೆ ಎಂದು ಧನೋವಾ ಹೇಳಿದ್ದಾರೆ.

ಅಂತೆಯೇ ನಾವು ವಾಯು ಸೇನೆಗೆ 2 ಸ್ಕ್ವಾಡ್ರನ್ (ಒಂದು ಸ್ಕ್ವಾಡ್ರನ್ ನಲ್ಲಿ 12 ರಿಂದ 24 ಯುದ್ಧ ವಿಮಾನಗಳಿರುತ್ತವೆ)ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ಹೇಳಿದ್ದೆವು ಎಂದು ಧನೋವಾ ಹೇಳಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Indian Air Force, Indian Army, B S Dhanoa, China, India, Rafale Deal, ನವದೆಹಲಿ, ಭಾರತೀಯ ವಾಯು ಸೇನೆ, ಭಾರತೀಯ ಸೇನೆ, ಬಿಎಸ್ ಧನೋವಾ, ಚೀನಾ, ಭಾರತ, ರಾಫೆಲ್ ಯುದ್ಧ ವಿಮಾನ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS