ಸೆ.15 ರಂದು 'ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Published: 12 Sep 2018 03:24 PM IST | Updated: 12 Sep 2018 03:59 PM IST
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇದೇ ತಿಂಗಳ 15 ರಂದು ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ  ಚಾಲನೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಮಹಾತ್ಮಗಾಂಧಿ ಅವರ 150 ಜನ್ಮ ವಾರ್ಷಿಕೋತ್ಸವ  ಅಂಗವಾಗಿ ಈ  ಆಂದೋಲನವನ್ನು  ಹಮ್ಮಿಕೊಳ್ಳಲಾಗಿದೆ.

ಈ ಆಂದೋಲನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಮತ್ತು ಸ್ವಚ್ಛ ಭಾರತ ನಿರ್ಮಾಣ ಮಾಡಲು ದೃಢ ಸಂಕಲ್ಪ ಮಾಡುವಂತೆ  ನರೇಂದ್ರಮೋದಿ ಸರಣಿ ಟ್ವಿಟ್ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.

ಅಕ್ಟೋಬರ್ 2 ಮಹಾತ್ಮಗಾಂಧಿ ಅವರ 150 ಜನ್ಮ ದಿನ ವಾರ್ಷಿಕೋತ್ಸವ  ಅಲ್ಲದೇ, ಮಹಾತ್ಮಗಾಂಧಿ ಅವರ  ಸ್ವಚ್ಛ ಭಾರತ ಕನಸು  ಈಡೇರಿಸುವ ನಿಟ್ಟಿನಲ್ಲಿ ಹಾಕಿಕೊಳ್ಳದ ಸ್ವಚ್ಛ ಭಾರತ ಮಿಷನ್ 4 ವರ್ಷ ಪೂರ್ಣಗೊಳಿಸಿದ ದಿನವಾಗಿದ್ದು, ಸ್ವಚ್ಛ ಭಾರತ  ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಎಲ್ಲರಿಗೂ ನಮನ ಸಲ್ಲಿಸುವುದಾಗಿ  ಪ್ರಧಾನಿ ಹೇಳಿದ್ದಾರೆ.

 ಸ್ವಚ್ಚತೆಯೇ ಸೇವೆ ಆಂದೋಲನ  ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ. ಮಹಾತ್ಮ ಗಾಂಧೀಜಿ ಅವರಿಗೆ ನಮನ ಸಲ್ಲಿಸಲು ಇದೊಂದು ದಾರಿಯಾಗಿದ್ದು, ಈ ಆಂದೋಲನದ ಭಾಗವಾಗಿ  ಸ್ವಚ್ಛ ಭಾರತ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಿ ಎಂದು ಟ್ವಿಟ್ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.
ಅಂದು  ಬೆಳಗ್ಗೆ 9-30ಕ್ಕೆ ಸ್ವಚ್ಛ ಭಾರತ ಮಿಷನ್ ನಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುವ ಮೂಲಕ ಸ್ವಚ್ಛತೆಯೇ ಸೇವೆ ಆಂದೋಲನಾ ಪ್ರಾರಂಭವಾಗಲಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶವನ್ನು ಅಕ್ಟೋಬರ್ 2, 2019 ರೊಳಗೆ ಬಯಲು ಬಹಿರ್ದೆಸೆ ಮುಕ್ತ ಹಾಗೂ ಸ್ವಚ್ಛತೆಯ   ನಿಟ್ಟಿನಲ್ಲಿ  2014 ರಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರ ಸ್ವಚ್ಛ ಭಾರತ  ಅಭಿಯಾನಕ್ಕೆ ಚಾಲನೆ ನೀಡಿತ್ತು.
Posted by: ABN | Source: ANI

ಈ ವಿಭಾಗದ ಇತರ ಸುದ್ದಿ