ಶಾಸಕರು, ಸಂಸದರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಕೇಸ್ ಗಳ ಮಾಹಿತಿ ಕೊಡಿ: ಸುಪ್ರೀಂ ಕೋರ್ಟ್

Published: 12 Sep 2018 01:23 PM IST | Updated: 12 Sep 2018 01:36 PM IST
ಸುಪ್ರೀಂಕೋರ್ಟ್
ನವೆದಹಲಿ: ಕ್ರಿಮಿನಲ್ ಕೇಸ್ ಗಳು ಬಾಕಿ ಉಳಿದಿರುವ ಶಾಸಕರು ಹಾಗೂ ಸಂಸದರ ಬಗ್ಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

2017ರ ಡಿಸೆಂಬರ್ ಆದೇಶದನ್ವಯ ವಿಶೇಷ ನ್ಯಾಯಾಲಯಗಳಿಗೆಂ ಪ್ರಕರಣವನ್ನು ವರ್ಗಾಯಿಸಲಾಗಿದೆಯೇ ಎಂದು ಕೇಳಿದೆ. 

ನ್ಯಾಯಮೂರ್ತಿ ರಂಜನ್ ಗಗೋಯ್, ನವೀನ್ ಸಿನ್ಹಾ ಮತ್ತು ಕೆ,ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯ ಪೀಠ ಆದೇಶದನ್ವಯ ಪ್ರಕರಣಗಳು ವಿಶೇಷ ಕೋರ್ಟ್ ಗೆ ವರ್ಗಾಯಿಸಲಾಗಿದೆಯೇ ಎಂದು ಪ್ರಶ್ನಿಸಿದೆ,

ರಾಜಕಾರಣಿಗಳ ಬಾಕಿ ಉಳಿದಿರುವ ಕೇಸ್ ಗಳ ಕಡತವನ್ನು ಹೆಚ್ಚುವರಿ  ವಿಶೇಷ ನ್ಯಾಯಾಲಯಕ್ಕೆ ಕಳುಹಿಸುವ ಅಗತ್ಯವಿದೆ ಎಂದು ಹೇಳಿದೆ, ಸಮಯಕ್ಕೆ ತಕ್ಕಂತೆ ಆಗಾಗ್ಗೆ, ನಿಗಾವಹಿಸಿ ಮಾನಿಟರ್ ಮಾಡುವ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದೆ. 

ಸೆಪ್ಟಂಬರ್ 11ರಂದು ಕೇಂದ್ರ ಕಾನೂನು ಇಲಾಖೆ  ಸಲ್ಲಿಸಿರುವ ಪ್ರಮಾಣ ಪತ್ರಗಳ ಬಗ್ಗೆ ತೃಪ್ತಿ ಹೊಂದ ಸುಪ್ರೀಂ ಕೋರ್ಟ್ ಮುಖ್ಯಕಾರ್ಯದರ್ಶಿಗಳಿಗೆ ವಿವರ ನೀಡುವಂತೆ ಸೂಚಿಸಿದೆ,

ಒಟ್ಟು 1,233 ಕ್ರಿಮಿನಲ್ ಕೇಸ್ ಗಳನ್ನು ವಿಶೇಷ ಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ,  ಅದರಲ್ಲಿ 136 ಪ್ರಕರಣಗಳನ್ನು  ವಿಲೇವಾರಿ ಮಾಡಲಾಗಿದ್ದು, ಇನ್ನೂ 1,097 ಕೇಸ್ ಗಳು ಬಾಕಿ ಉಳಿದಿವೆ ಎಂದು ಪ್ರಮಾಣ ಪತ್ರ ಸಲ್ಲಿಸಲಾಗಿತ್ತು.
Posted by: SD | Source: IANS

ಈ ವಿಭಾಗದ ಇತರ ಸುದ್ದಿ