ಉಡುಪಿ ಮಿಸ್‌ ಇಂಡಿಯಾ ಸಿನಿ ಶೆಟ್ಟಿ ಭೇಟಿ; ಅದ್ಧೂರಿ ಸ್ವಾಗತ

ಫೇಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿಯವರನ್ನು ಉಡುಪಿಯಲ್ಲಿ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು.

Updated on
ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಮೂಲದವರಾಗಿರುವ ಸಿನಿ ಶೆಟ್ಟಿ, ಮಿಸ್ ಇಂಡಿಯಾ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ್ದಾರೆ.

ನಗರದ ಜೋಡು ಕಟ್ಟೆ ಮೂಲಕ ಭವ್ಯ ಸ್ವಾಗತಿಸಿದ್ದು, ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಅಭಿಮಾನಿಗಳು ಕರೆತಂದರು.

ತಂದೆ ಸದಾನಂದ ಶೆಟ್ಟಿ, ತಾಯಿ ಹೇಮ ಶೆಟ್ಟಿ ಜೊತೆಗೆ ಮೆರವಣಿಗೆಯಲ್ಲಿ ಸಿನಿ ಶೆಟ್ಟಿ ಆಗಮಿಸಿದ್ದರು.

ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಸಂಘದಿಂದ ಸನ್ಮಾನ ಮಾಡಲಾಯಿತು.

ಸಭಾಂಗಣದ ಸಿದ್ಧಿ ವಿನಾಯಕ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಿನಿ ಶೆಟ್ಟಿ, ಅಜ್ಜಿಯನ್ನು ಕಂಡು ಭಾವುಕರಾದರು.

ಅಜ್ಜಿಯನ್ನು ಬಿಗಿದಪ್ಪಿಕೊಂಡು, ಮಾತನಾಡಿಸಿದ ಸಿನಿ ಶೆಟ್ಟಿ, ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು.

ನಾನು ಎಲ್ಲೇ ಹೋದರು ಯಾವುದೇ ಉಡುಗೆ ತೊಟ್ಟರೂ ನನಗೆ ಬೆಂಬಲವಾಗಿದ್ದರು ಎಂದರು.

ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಿದ್ದರು.

ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ.

ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ.

ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು.

ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಈಗಾಗಲೇ ವೆಬ್‌ ಸೀರಿಸ್‌ಗಳಲ್ಲಿ ನಟಿಸಿರುವುದರಿಂದ ನನಗೆ ನಟನೆಯ ಅನುಭವ ಇದೆ.

ತುಳು ನನ್ನ ತಾಯಿ ಭಾಷೆ, ಅದರಲ್ಲಿ ಒಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೇ ನಟಿಸಲಿಕ್ಕೆ ಸಿದ್ಧ ಎಂದರು.

ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ. ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com