
2020ನೇ ಇಸವಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು ಕೊರೋನಾ ವೈರಸ್ ನಿಂದ. ಪಡಬಾರದ ಕಷ್ಟಗಳನ್ನು ಜನರು ಪಟ್ಟರು. ಆದರೆ ಅದರಿಂದ ಜನರು ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು ಮುಂದಡಿಯಿಟ್ಟಿದ್ದಾರೆ.
1 / 9

ಆಸ್ಟ್ರೇಲಿಯಾದ ಸಿಡ್ನಿಯ ಒಪೆರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ ನಲ್ಲಿ ಹೊಸ ವರ್ಷಾಚರಣೆ 2021 ಕಂಡುಬಂದದ್ದು ಹೀಗೆ. ಸಾಮಾನ್ಯವಾಗಿ ಪ್ರತಿವರ್ಷ ಹೊಸ ವರ್ಷಾಚರಣೆ ಸಂಭ್ರಮ ಇಲ್ಲಿ ಮುಗಿಲುಮುಟ್ಟುತ್ತದೆ. ಸಿಡ್ನಿ ಬಂದರು ತೀರದಲ್ಲಿ ಈ ದಿನ ಸುಮಾರು 10 ಲಕ್ಷ ಜನ ಸೇರಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಆದರೆ ಈ ವರ್ಷ ಇಲ್ಲಿನ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ಹೊಸ ವರ್ಷದ ಸಂಭ್ರಮ ಅಷ್ಟೊಂದು ಜೋರಾಗಿ ಇಲ್ಲ.
2 / 9

ನ್ಯೂಜಿಲ್ಯಾಂಡ್ ನ ಔಕ್ನಾಂಡ್ ನ ಸ್ಕೈ ಟವರ್ ನಲ್ಲಿ ಹೊಸ ವರ್ಷ 2021ನ್ನು ಸ್ವಾಗತಿಸಿದ್ದು ಹೀಗೆ. ನ್ಯೂಜಿಲ್ಯಾಂಡ್ ಮತ್ತು ಅದರ ದಕ್ಷಿಣ ಫೆಸಿಫಿಕ್ ದ್ವೀಪದಲ್ಲಿ ಕೊರೋನಾ ಸೋಂಕು ಇಲ್ಲ, ಹೀಗಾಗಿ ಎಂದಿನಂತೆ ನಿನ್ನೆ ಕೂಡ ಹೊಸ ವರ್ಷ ಸಂಭ್ರಮಾಚರಣೆ ನೆರವೇರಿತು.
3 / 9

ತೈವಾನ್ ನ ತೈಪೈ 101 ಕಟ್ಟಡದಲ್ಲಿ ನಿನ್ನೆ ಕಂಡುಬಂದ ಪಟಾಕಿ ಹಚ್ಚುವಿಕೆಯ ದೃಶ್ಯ
4 / 9

ಜಕಾರ್ತದ ಹೊಟೇಲ್ ಇಂಡೋನೇಷಿಯಾ ರೌಂಡಬೌಟ್ ನಲ್ಲಿ ನಿನ್ನೆ ಕಂಡು ಬಂದ ದೃಶ್ಯ.ಜಕಾರ್ತದ ಇದೇ ಹೊಟೇಲ್ ನಲ್ಲಿ ಡಿಸೆಂಬರ್ 31, 2016ರಲ್ಲಿ ಜನದಟ್ಟಣೆ ಸೇರಿ ಕಂಡುಬಂದದ್ದು ಹೀಗೆ.
5 / 9

ಟೊಕ್ಯೊದ ಸೆನ್ಸೊಜಿ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ ಜನತೆ.
6 / 9

ಇದು ಹೊಸ ದಶಕದ ಆರಂಭವಾಗಿರಬಹುದು. ಆದರೆ ಇನ್ನೂ ಕೊರೋನಾ ವೈರಸ್ ಹೋಗಿಲ್ಲ, ಚಿತ್ರದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸಿಕೊಂಡು ಪಬ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾರೆ. ಇದು ಕಂಡುಬಂದಿದ್ದು ಬ್ರುಝೆಲ್ಸ್ ನಲ್ಲಿ.
7 / 9

ತೆರೆಯ ಮೇಲೆ ಫಿಯೊನಿಕ್ಸ್ ಕಂಡುಬರುತ್ತಿದೆ. ಚೀನಾದ ಬೀಜಿಂಗ್ ನಲ್ಲಿ ಕಟ್ಟಡ ಮುಂದೆ ಸೆಕ್ಯುರಿಟಿ ಗಾರ್ಡ್ ನಿಂತಿದ್ದಾರೆ.
8 / 9

ಭಾರತದಲ್ಲಿ ಹೊಸ ದಶಕ ಆರಂಭದ ವರ್ಷದಲ್ಲಿ ಜನರಲ್ಲಿ ಇರುವ ಬಹುದೊಡ್ಡ ಭರವಸೆ ಕೊರೋನಾ ವೈರಸ್ ಗೆ ಲಸಿಕೆ ಬರಬಹುದು ಎಂದು. ಅಹ್ಮದಾಬಾದ್ ನಲ್ಲಿ ಜನರು 2021ನ್ನು ಸ್ವಾಗತಿಸಲು ಫಲಕಗಳನ್ನು ಹಿಡಿದುಕೊಂಡಿರುವುದು.
9 / 9
Stay up to date on all the latest ಇತರೆ news