ಶ್ರೇಷ್ಠ ವಾಗ್ಮಿ, ಮಾನವತಾವಾದಿ ವಾಜಪೇಯಿ ಕವಿತೆಗಳ ಕೆಲ ಅದ್ಭುತ ಸಾಲುಗಳು

ನಮ್ಮನ್ನು ಕ್ಷಮಿಸು ಬಾಪೂ! ನಾವು ವಚನ ಮುರಿದ ಅಪರಾಧಿಗಳು, ರಾಜಘಾಟ್ ನಮ್ಮಿಂದ ಅಪವಿತ್ರವಾಯಿತು, ಯಾತ್ರೆ ಮಧ್ಯದಲ್ಲೇ ಗುರಿಯನ್ನು ಮರೆತೆವು. ಜಯಪ್ರಕಾಶ್ ಜೀ! ನಂಬಿಕೆ ನಮ್ಮಲ್ಲಿರಲಿ, ಭಗ್ನ ಸ್ವಪ್ನಗಳ ಪುನಃ ಜೋಡಿಸಿ ಉರಿದ ಚಿತೆಯ ಭಸ್ಮದ ಕಿಡಿಯಿಂದ ಕತ್ತರಿಸುವೆವು ಕತ್ತಲ ಬಂಧ! 

Updated on
<div>ಸ್ವಾತಂತ್ರ್ಯೋತ್ಸವ ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನ
ಸ್ವಾತಂತ್ರ್ಯೋತ್ಸವ ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನ
ಯಮುನೆಯ ತೀರ, ಮರಳಿನ ಹಾಸು, ಹುಲ್ಲು-ಮಣ್ಣಿನಲ್ಲಿ ಕಟ್ಟಿದ ಗೂಡು, ಸೆಗಣಿ ಹಾಕಿ ಸಾರಿಸಿದ ಅಂಗಳ ಶ್ರೀತುಳಸಿಯ ಬೃಂದಾವನ, ಮಂಗಳ ಮೊಳಗುವ ಗಂಟೆಯ ನಿವಾದ ಕೇಳಿ! ರಾಮಾಯಣ ತಾಯಿ ಬಾಯಲ್ಲಿ!

ಸರಸ್ವತಿಯ ಸಾಧನೆಯೇ ತೃಪ್ತಿ ದೂರದಲ್ಲಿಯೇ ಉಳಿದಳು ಲಕ್ಷ್ಮಿ ಹಣೆಗೆ ಹಚ್ಚಿದ್ದು ಮಣ್ಣಿನ ತಿಲಕ ಮಣ್ಣಿನ ನಂಟೇ ಅಂತ್ಯದ ತನಕ! ಹೊಸ ವರ್ಷದ ಆಗಮನದ ಹೊತ್ತು ಮಾಡಿಕೊಂಡು ಇಷ್ಟೇ ಪುರುಸೋತ್ತು ಮಿಂದೇಳುವ ಪುಣ್ಯ ಸ್ಮೃತಿಯಲ್ಲಿ!

ಅಪ್ಪನ ಬೈಠಕ್ ಖಾನೆಯ ಹೊರಗೆ ಗೋಡೆಗೆ ಒರಗಿದೆ ಮಡಿಸಿದ ಚಾಪೆ, ಅವರನ್ನು ಮಾಡಲು ಬಂದವರಿಗೆ ಭೇಟಿ ಬರುವುದು ಬೇಡವೋ ಎನ್ನುವ ಒಳತೋಟಿ ಹಣಗೆ ಕುಂಕುಮ, ಕಣ್ಣಿಗೆ ಚಷ್ಮಾ ತೆರೆದಿದೆ ಹೊತ್ತಗೆ, ಬಡಬಡಿಸುವ ಬಾಯಿ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com