ಕ್ರಾಂತಿಕಾರಿ ಭಗತ್ ಸಿಂಗ್ ಕುರಿತ ಕುತೂಹಲಕರ ವಿಷಯಗಳು 

ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 112ನೇ ಜನ್ಮದಿನ ಇಂದು. ಅವರಿಗೆ ಗೌರವ ನಮನ
ಭಗತ್ ಸಿಂಗ್ ಜನಿಸಿದ್ದು ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲ್ಯಲ್ಲ್ ಪುರ್ ನಲ್ಲಿ 1907ರ ಸೆಪ್ಟೆಂಬರ್ 28ರಂದು. ಮಾರ್ಕ್ಸ್ ವಾದಿ ಸಮಾಜವಾದಿ ಕ್ರಾಂತಿಕಾರಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಜನಪ್ರಿಯರಾಗಿದ್ದ ಭಗತ್ ಸಿಂಗ್ 23ನೇ ವಯಸ್ಸಿನಲ್ಲಿಯೇ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮ

Updated on
ಭಗತ್ ಸಿಂಗ್ ಮೂಲತಃ ಒಬ್ಬ ನಾಟಕಗಾರ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕಾಲೇಜು ದಿನಗಳಲ್ಲಿ ವೇದಿಕೆ ಪ್ರದರ್ಶನಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಅಭಿನಯಿಸುತ್ತಿದ್ದ ರಾಣಾ ಪ್ರತಾಪ ಮತ್ತು ಚಂದ್ರಗುಪ್ತ ಮೌರ್ಯ ಬಹುಮುಖ್ಯ ಪಾತ್ರಗಳು.

ಜಲಿಯನ್ ವಾಲಾ ಬಾಂಗ್ ಹತ್ಯಾಕಾಂಡ ಭಗತ್ ಸಿಂಗ್ ಜೀವನದ ಮೇಲೆ ಬಹಳ ಪ್ರಭಾವ ಬೀರಿತ್ತು. ಆಗ ಭಗತ್ ಸಿಂಗ್ 12 ವರ್ಷದ ಬಾಲಕ. ಹತ್ಯಾಕಾಂಡವಾದ ಸ್ಥಳಕ್ಕೆ ಹೋಗಿ ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನು ಕಂಡು ದುಃಖಿತನಾಗಿ ಅಲ್ಲಿಂದ ಮಣ್ಣನ್ನು ತಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಆಗಲೇ

ತನ್ನ ಮನೆಯ ಜಮೀನಿನಲ್ಲಿ ಬೆಳೆ ಬೆಳೆಯುವ ಬದಲು ಬ್ರಿಟಿಷರ ವಿರುದ್ಧ ಹೋರಾಡಲು ಬಂದೂಕು, ಶಸ್ತ್ರಗಳ ಬೆಳೆ ಬೆಳೆಯುತ್ತೇನೆಂದು ಹೇಳಿದ ಧೈರ್ಯಶಾಲಿ ಬಾಲಕ.

ಭಗತ್ ಸಿಂಗ್ ಸಣ್ಣ ವಯಸ್ಸಿನಲ್ಲಿಯೇ ಒಬ್ಬ ಉತ್ತಮ ಓದುಗಾರ ಮಾತ್ರವಲ್ಲದೆ ಅದ್ಭುತ ಬರಹಗಾರನೂ ಕೂಡ ಹೌದು. ಆಗಿನ ಕಾಲದಲ್ಲಿ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಜೈಲಿನಲ್ಲಿದ್ದುಕೊಂಡು ಕರಪತ್ರಗಳನ್ನು ಬರೆಯುತ್ತಿದ್ದರು. ಅವುಗಳಲ್ಲಿ ಅವರು ಬರೆದ ಒಂದು ಕರಪತ್ರ ನಾನೇಕೆ ನಾಸ್ತಿಕ ಎಂಬುದು ಬಹಳ ಜನಪ್ರಿಯವಾಗಿತ್ತು

ಮನೆಯಲ್ಲಿ ಮದುವೆ ಮಾಡಿಸಲು ಹುಡುಗಿ ಹುಡುಕುತ್ತಿದ್ದಾರೆ ಎಂದು ಗೊತ್ತಾದಾಗ ಮನೆಬಿಟ್ಟು ಓಡಿಹೋದರು. ಮದುವೆಯಲ್ಲಿ ಆಸಕ್ತಿ ಇರಲಿಲ್ಲ. ಮನೆ ಬಿಟ್ಟು ಹೋಗುವಾಗ ಒಂದು ಬರಹ ಬರೆದು ನನ್ನ ಜೀವನ ದೇಶದ ಸ್ವಾತಂತ್ರ್ಯಕ್ಕೆ, ಮಾನವೀಯ ಕೆಲಸಗಳಿಗೆ ಸೀಮಿತ ಎಂದು ಬರೆದು ಖಾನ್ಪುರಕ್ಕೆ ಹೋದರು.

ಭಗತ್ ಸಿಂಗ್ ಗೆ ಶಿಕ್ಷೆ ಪ್ರಕಟವಾಗುವುದಕ್ಕೆ ಒಂದು ಗಂಟೆ ಮೊದಲು ಭಗತ್ ಸಿಂಗ್ ನೇಣು ಬಿಗಿದುಕೊಂಡು ಹುತಾತ್ಮರಾದರು. ಅವರ ದೇಹವನ್ನು ಕುಟುಂಬಸ್ಥರಿಗೆ ನೀಡಲಿಲ್ಲ. ಬದಲಿಗೆ ಗೌಪ್ಯವಾಗಿ ಸಟ್ಲೆಜ್ ನದಿ ತೀರದಲ್ಲಿ ದಹನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com