'ಮಾಧುರ್ಯ ರಾಣಿ', 'ಗಾನ ಕೋಗಿಲೆ' ಲತಾ ಮಂಗೇಶ್ಕರ್ ಕುರಿತ ಆಸಕ್ತಿ ವಿಷಯಗಳು

ಭಾರತದ ಗಾನಕೋಗಿಲೆ, ಸ್ವರ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ, ಅವರ ಸಂಗೀತ ಜೀವಂತ. ಲತಾ ಮೂಲ ಹೆಸರು ಹೇಮಾ.

Updated on
ತಂದೆ ದೀನನಾಥ್ ಮಂಗೇಶ್ಕರ್ ಅವರ ನಾಟಕ ಭಾವ್ ಬಂದನ್ ನಲ್ಲಿನ ಪಾತ್ರವಾದ ಲತಿಕಾ ಹೆಸರನ್ನು ಹಿರಿಯ ಮಗಳಿಗೆ ಇಟ್ಟರು. ಕುಟುಂಬದ ಹೆಸರು ಮಂಗೇಶ್ಕರ್ ಗೋವಾದ ಮಂಗೇಶಿ ಗ್ರಾಮದಿಂದ ಬಂದಿದ್ದು.

ಲತಾ ಶಾಲೆಗೆ ಹೋಗಿದ್ದು ಕೇವಲ ಒಂದು ದಿನ. ಶಾಲೆಗೆ ಹೋದ ಮೊದಲ ದಿನವೇ ಬೇರೆ ಮಕ್ಕಳಿಗೆ ಸಂಗೀತ ಹೇಳಿಕೊಟ್ಟದ್ದಕ್ಕಾಗಿ ಶಿಕ್ಷಕರು ಬೈದರಂತೆ. ನಂತರ ಶಾಲೆಗೆ ಹೋಗಲಿಲ್ಲ. ಮನೆಯಲ್ಲಿಯೇ ಕಲಿತುಕೊಂಡರು.

ಬಾಲಿವುಡ್ ನಲ್ಲಿ ಹಾಡು ಹಾಡಿದ ಕಲಾವಿದರಿಗೆ, ಗಾಯಕರಿಗೆ ಉತ್ತಮ ಗೌರವ ಧನ, ಹಣ ಕೊಡಬೇಕೆಂದು ಬೇಡಿಕೆಯಿಟ್ಟ ಮೊದಲ ಮಹಿಳಾ ಗಾಯಕಿ.

1974ರಲ್ಲಿ ಅತಿ ಹೆಚ್ಚು ಹಾಡುಗಳನ್ನು ರೆಕಾರ್ಡ್ ಗಳಲ್ಲಿ ಹಾಡಿ ದಾಖಲೆ ಮಾಡಿದವರು ಎಂದು ಗಿನ್ನೆಸ್ ಬುಕ್ ದಾಖಲೆಯಲ್ಲಿ ಲತಾ ಮಂಗೇಶ್ಕರ್ ಹೆಸರು ಸೇರಿಸಲಾಯಿತಾದರೂ ಅದನ್ನು ಗಾಯಕ ಮೊಹಮ್ಮದ್ ರಫಿ ನಿರಾಕರಿಸಿದರು.

1979 ರಲ್ಲಿ, ಅವರು ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ರೆನ್ ಆರ್ಕೆಸ್ಟ್ರಾದಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯರಾಗಿದ್ದರು.

ಭಾರತೀಯ ಕಲಾವಿದರ ಹೊರತಾಗಿ, ಲತಾ ಮಂಗೇಶ್ಕರ್ ಮೊಜಾರ್ಟ್, ಬೀಥೋವನ್, ಚಾಪಿನ್, ನ್ಯಾಟ್ ಕಿಂಗ್ ಕೋಲ್, ದಿ ಬೀಟಲ್ಸ್, ಬಾರ್ಬ್ರಾ ಸ್ಟ್ರೈಸಾಂಡ್ ಮತ್ತು ಹ್ಯಾರಿ ಬೆಲಾಫೊಂಟೆಗಳನ್ನು ಕೇಳಲು ಇಷ್ಟಪಡುತ್ತಿದ್ದರು. ಮರ್ಲೀನ್ ಡೈಟ್ರಿಚ್ ಲೈವ್ ಆಗಿ ಹಾಡುವುದನ್ನು ನೋಡಲು ಹೋಗಿದ್ದರು.

ಲತಾ ಮಂಗೇಶ್ಕರ್ ಪ್ರಾಣಿಪ್ರಿಯೆ, ಅವರ ಮನೆಯಲ್ಲಿ 9 ನಾಯಿಗಳಿದ್ದವು.

ಶೆರ್ಲಾಕ್ ಹೋಮ್ಸ್ ಕಾದಂಬರಿಗಳನ್ನು ಓದುವುದೆಂದರೆ ಬಹಳ ಅಚ್ಚುಮೆಚ್ಚು.

ಕ್ರಿಕೆಟ್ ಮೇಲೆ ವಿಪರೀತ ಹುಚ್ಚು. ಟೆಸ್ಟ್ ಮ್ಯಾಚ್ ಗಳನ್ನು ನೋಡಲು ಹಾಡಿನ ರೆಕಾರ್ಡ್ ಇದ್ದರೆ ಬಿಡುವು ಮಾಡಿಕೊಂಡು ನೋಡುತ್ತಿದ್ದರಂತೆ. ಕ್ರಿಕೆಟಿಗ ಡಾನ್ ಬ್ರಾಡ್‌ಮನ್‌ರ ಹಸ್ತಾಕ್ಷರವಿರುವ ಚಿತ್ರದ ಮಾಲೀಕರೂ ಆಗಿದ್ದರು.

ಅಮೆರಿಕಾದ ಲಾಸ್ ವೇಗಾಸ್ ಲತಾ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಅವರು ಸಿತಾರ್ ಮಾಂತ್ರಿಕ ರವಿಶಂಕರ್ ಅವರ ಸ್ಟುಡಿಯೊಗೆ ಭೇಟಿ ನೀಡುವುದನ್ನು ಇಷ್ಟಪಟ್ಟರು, ಅಲ್ಲಿ ಅವರು ಒಮ್ಮೆ ಬೀಟಲ್ಸ್ ಸದಸ್ಯ ಜಾರ್ಜ್ ಹ್ಯಾರಿಸನ್ ಅವರನ್ನು ಭೇಟಿಯಾದರು.

ಲತಾ ಅವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಕಾರು ಸಂಗ್ರಹ ಕೂಡ ಒಂದು. ಬೂದು ಬಣ್ಣದ ಹಿಲ್‌ಮ್ಯಾನ್ ಮತ್ತು ನೀಲಿ ಷೆವರ್ಲೆ, ಕ್ರಿಸ್ಲರ್ ಮತ್ತು ಮರ್ಸಿಡಿಸ್ ಕೆಲವು ಅಮೂಲ್ಯ ಕಾರುಗಳ ಸಂಗ್ರಹವಾಗಿದೆ.

ಒಂದು ಬಾರಿ ಲತಾ ಮಂಗೇಶ್ಕರ್ ಮೇಲೆ ವಿಷಪ್ರಾಶನವಾಗಿತ್ತಂತೆ. ಇದರಿಂದ ಅನಾರೋಗ್ಯಕ್ಕೀಡಾಗಿ ಅವರು ಸುಮಾರು ಮೂರು ತಿಂಗಳು ಹಾಸಿಗೆ ಹಿಡಿದಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com