ಸೆಲೆಬ್ರಿಟಿ ದಂಪತಿಗಳ ವಿಚಾರ ಬಂದಾಗ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.
ದೆಹಲಿಯ ಫೆರೋಜ್ ಶಾ ಕೊಟ್ಲಾ ಮೈದಾನವನ್ನು ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿ ಮೈದಾನವೆಂದು ಮರು ನಾಮಕರಣ ಮಾಡುವ ಸಮಾರಂಭದಲ್ಲಿ ಅರುಣ್ ಜೇಟ್ಲಿಯವರ ಕುಟುಂಬಸ್ಥರೊಂದಿಗೆ ವಿರಾಟ್ ಮತ್ತು ಅನುಷ್ಕಾ ಮಾತನಾಡುತ್ತಿರುವಾಗ ಕ್ಯಾಮರಾ ಕಣ್ಣುಗಳು ಅವರ ಮೇಲೆಯೇ ಹರಿಯಿತು.
ತಮ್ಮ ತಂದೆ ತೀರಿ ಹೋದ ಸಮಯದಲ್ಲಿ ಮನೆಗೆ ಬಂದು ಧೈರ್ಯ ಹೇಳಿದ್ದ ಅರುಣ್ ಜೇಟ್ಲಿಯವರನ್ನು ಕೊಹ್ಲಿ ಅವರ ಕುಟುಂಬಸ್ಥರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿರುಷ್ಕಾ ಜೋಡಿ, ಗಣ್ಯರ ಮಧ್ಯೆ ಜೇಟ್ಲಿ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು.
ಕಾರ್ಯಕ್ರಮದ ಮಧ್ಯೆ ಅನುಷ್ಕಾ ವಿರಾಟ್ ಕೈಗೆ ಮುತ್ತು ಕೊಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೈದಾನದ ಒಂದು ಪೆವಿಲಿಯನ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಗಿದೆ. ಇದಕ್ಕೆ ವಿರಾಟ್ ಭಾವಪೂರ್ವಕವಾಗಿ ಧನ್ಯವಾದ ಹೇಳಿದರು.
ಕಾರ್ಯಕ್ರಮದಲ್ಲಿ ವಿರಾಟ್ ಬಿಳಿ ಬಣ್ಣದ ಶರ್ಟ್, ಕಡು ಬಣ್ಣದ ಪ್ಯಾಂಟ್ ಮತ್ತು ನೆಹರೂ ಜಾಕೆಟ್ ತೊಟ್ಟು ಮಿಂಚಿದ್ದರೆ ಅನುಷ್ಕಾ ಸವ್ಯಸಾಚಿ ಮುಖರ್ಜಿ ವಿನ್ಯಾಸದ ನೀಲಿ ಬಣ್ಣದ ಸಲ್ವಾರ್ ಮತ್ತು ಅದಕ್ಕೊಪ್ಪುವ ಕಿವಿಯೋಲೆ ಧರಿಸಿದ್ದರು.
ಚಿತ್ರದಲ್ಲಿ ಸಂತೋಷದಿಂದ ನಗುತ್ತಿರುವ ಅನುಷ್ಕಾ ಶರ್ಮ
ಕಾರ್ಯಕ್ರಮಕ್ಕೆ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮ