
ಪಿಲವುಲ್ಲಕಂಡಿ ತೆಕ್ಕೆಪರಂಬಿಲ್ ಉಷಾ ಭಾರತ ಕಂಡ ಉತ್ತಮ ಬಹುಖ್ಯಾತಿಯ ಅಥ್ಲೆಟ್. ಪಯ್ಯೊಲಿ ಎಕ್ಸ್ ಪ್ರೆಸ್, ಕ್ವೀನ್ ಆಫ್ ಇಂಡಿಯಾ ಟ್ರಾಕ್ ಅಂಡ್ ಫೀಲ್ಡ್ ಅಂತ ಅವರಿಗೆ ಅಡ್ಡ ಹೆಸರು ಕೂಡ ಇದೆ. ಕೇರಳದ ಕೋಝಿಕ್ಕೋಡ್ ಮೂಲದವರು.ಇಂದು 56 ವರ್ಷಗಳನ್ನು ಪೂರೈಸಿದ್ದಾರೆ.
1 / 11

ಇಂದು 1978ರಲ್ಲಿ ಅಂತರರಾಜ್ಯ ಜ್ಯೂನಿಯರ್ ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕ ಗೆದ್ದಿದ್ದ ಸಂದರ್ಭ. 100 ಮೀ, 60 ಮೀ ಹರ್ಡಲ್ಸ್, ಹೈ ಜಂಪ್ ಮತ್ತು 200 ಮೀಟರ್, ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ ಮತ್ತು 4*100 ಮೀಟರ್ ರಿಲೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಆಗ ಈಕೆಯ ವಯಸ್ಸು ಕೇವಲ 14.ಚಿತ್ರದಲ್ಲಿ ಅವರ ಕೋಚ್
2 / 11

1979ರ ನ್ಯಾಷನಲ್ ಗೇಮ್ಸ್ ಮತ್ತು 1980ರ ಅಂತರಾಜ್ಯ ಗೇಮ್ಸ್ ನಲ್ಲಿ ಹಲವು ಪ್ರಶಸ್ತಿ ಗಿಟ್ಟಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
3 / 11

16 ವರ್ಷದಲ್ಲಿ 1980ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿ 100 ಮೀಟರ್ ಓಟದಲ್ಲಿ 5ನೆಯವರಾಗಿ ಪಂದ್ಯ ಮುಗಿಸಿದರು.
4 / 11

1981ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರಾಜ್ಯ ಕ್ರೀಡಾಕೂಟದಲ್ಲಿ 100 ಮೀಟರ್ ಮತ್ತು 200 ಮೀಟರ್ ನ್ನು ಕ್ರಮವಾಗಿ 11.8 ಸೆಕೆಂಡ್ ಮತ್ತು 24.6 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ನಿರ್ಮಿಸಿದರು.ಚಿತ್ರದಲ್ಲಿ ಉಷಾ ಮತ್ತು ಶೈನಿ ವಿಲ್ಸನ್ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು.
5 / 11

ಅದೇ ವರ್ಷ ಕುವೈತ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ 400 ಮೀಟರ್ ನಲ್ಲಿ ಉಷಾ ಚಿನ್ನದ ಪದಕ ಗಳಿಸಿದರು.
6 / 11

1984ರಲ್ಲಿ ಲಾಸ್ ಏಂಜಲಿಸ್ ಒಲಿಂಪಿಕ್ ನಲ್ಲಿ ಪ್ರಿ ಟ್ರಯಲ್ ನಲ್ಲಿ ಅಮೆರಿಕದ ಜೂಡಿ ಬ್ರೌನ್ ಅವರನ್ನು 55.7 ಸೆಕೆಂಡ್ ಗಳಲ್ಲಿ ಓಡಿ ಹಿಂದಿಕ್ಕಿದ್ದರು. ಅದಕ್ಕೂ ಮೊದಲು ಎಂ ಡಿ ವಲ್ಸಮ್ಮ ಅವರನ್ನು ಸೋಲಿಸಿ ಏಷ್ಯನ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ ನಲ್ಲಿ ನಾಲ್ಕನೇ ಸ್ಥಾನ ಬಂದರು, ಕಂಚಿನ ಪದಕವನ್ನು ಸ್ವಲ್ಪದರಲ್ಲಿ
7 / 11

1984ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆದ 400 ಮೀಟರ್ ಹರ್ಡಲ್ ನಲ್ಲಿ 55.42 ಸೆಕೆಂಡ್ ಗಳಲ್ಲಿ ಪೂರೈಸಿದರು. ಆ ಸಮಯದಲ್ಲಿ ಪಿ ಟಿ ಉಷಾ, ಭಾರತ ಎಂದು ಪೋಸ್ಟ್ ನಲ್ಲಿ ವಿಳಾಸ ಬರೆದು ಕಳುಹಿಸಿದರೆ ಸಾಕು, ಅದು ನೇರವಾಗಿ ಅವರಿಗೆ ತಲುಪುತ್ತಿತ್ತು.
8 / 11

ಕಾಮನ್ವೆಲ್ತ್ ಗೇಮ್ ನಲ್ಲಿ 55.54 ಸೆಕೆಂಡ್ ಗಳಲ್ಲಿ ಓಡಿ ಸೆಮಿ-ಫೈನಲ್ ಮುಗಿಸಿದ್ದರು.
9 / 11

1984ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆದ 400 ಮೀಟರ್ ಹರ್ಡಲ್ ನಲ್ಲಿ 55.42 ಸೆಕೆಂಡ್ ಗಳಲ್ಲಿ ಪೂರೈಸಿದರು. ಆ ಸಮಯದಲ್ಲಿ ಪಿ ಟಿ ಉಷಾ, ಭಾರತ ಎಂದು ಪೋಸ್ಟ್ ನಲ್ಲಿ ವಿಳಾಸ ಬರೆದು ಕಳುಹಿಸಿದರೆ ಸಾಕು, ಅದು ನೇರವಾಗಿ ಅವರಿಗೆ ತಲುಪುತ್ತಿತ್ತು. ಸಿಂಗಲ್ ಟ್ರಾಕ್ ಪಂದ್ಯದಲ್ಲಿ ಅತಿಹೆಚ್ಚು ಚಿನ್ನದ ಪದಕ ಗಳಿಸಿದ ಮಹಿ
10 / 11

ಸಿಂಗಲ್ ಟ್ರಾಕ್ ಪಂದ್ಯದಲ್ಲಿ ಅತಿಹೆಚ್ಚು ಚಿನ್ನದ ಪದಕ ಗಳಿಸಿದ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ಪಿ ಟಿ ಉಷಾ ಹೊಂದಿದ್ದಾರೆ. 1985ರ ಏಷ್ಯನ್ ಟ್ರಾಕ್ ಮತ್ತು ಜಕಾರ್ತದಲ್ಲಿ ನಡೆದಿದ್ದ ಫೀಲ್ಡ್ ಪಂದ್ಯಗಳಲ್ಲಿ 100 ಮೀಟರ್ ನ್ನು 11.64 ಸೆಕೆಂಡ್ ಗಳಲ್ಲಿ, 200 ಮೀಟರ್ ನ್ನು 23.05 ಸೆಕೆಂಡ್ ಗಳಲ್ಲಿ , 400 ಮೀಟರ
11 / 11
Stay up to date on all the latest ಕ್ರೀಡೆ news