
ಸುರೇಶ್ ಕುಮಾರ್
ಈ ಸಂಬಂಧ ಸದನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ಪತ್ರ ಬರೆದು ಸದನ ಸಮಿತಿಯಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆ ಸ್ಪೀಕರ್ ಆಗಿದ್ದ ವೇಳೆ ಅಕ್ಟೋಬರ್ 2014 ರಂದು ಸಮಿತಿ ರಚನೆಯಾಗಿತ್ತು. ಈ ಹಿಂದೆ ವಿಧಾನಸಭೆಯಲ್ಲಿ ಕೆರೆ ಒತ್ತುವರಿ ಕುರಿತು ಚರ್ಚೆ ನಡೆದಾಗ ಸದನ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಯಿತು. ಆಗಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನ ಸಮಿತಿಯನ್ನು ನಿಮ್ಮ ಅಧ್ಯಕ್ಷತೆಯಲ್ಲಿ ರಚಿಸಿದ್ದರು. ನಂತರ ಕಾಗೋಡು ತಿಮ್ಮಪ್ಪ ಸಚಿವರಾದರು. ಅವರಿಂದ ತೆರವಾದ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನಿಮ್ಮನ್ನು ಆಯ್ಕೆ ಮಾಡಲಾಯಿತು. ಸಭಾಧ್ಯಕ್ಷ ಸ್ಥಾನದ ಜತೆ ಸದನ ಸಮಿತಿ ಅಧ್ಯಕ್ಷ ಸ್ಥಾನದಲ್ಲಿಯೂ ನೀವೇ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದೀರಿ. ಆರಂಭದಲ್ಲಿ ನಾನು ಇದರ ಔಚಿತ್ಯದ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ. ಆದರೆ, ಈ ಬಗ್ಗೆ ನಾನು ಗಂಭೀರವಾಗಿ ಯೋಚನೆ ಮಾಡಿ ವಿಧಾನಸಭೆಯ ಕೆಲ ಮಾಜಿ ಅಧ್ಯಕ್ಷರೊಂದಿಗೆ ಚರ್ಚಿಸಿದೆ. ಎರಡೂ ಹುದ್ದೆಗಳಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಅನಿಸಿದ್ದರಿಂದ ಸದನ ಸಮಿತಿಯಿಂದ ಹೊರ ಬರುತ್ತಿರುವುದಾಗಿ ಪತ್ರದಲ್ಲಿ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಸ್ಪೀಕರ್ ಕೋಳಿವಾಡ ಅವರ ಪ್ರತಿಕ್ರಿಯೆಗಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅವರನ್ನು ಸಂಪರ್ಕಿಸಿತ್ತು. ನನಗೆ ಯಾವುದೇ ಪತ್ರ ಸಿಕ್ಕಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದಾರೆ.