ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ, ಎಂ.ಬಿ. ಪಾಟೀಲ್ ಗೆ ಗೃಹ ಖಾತೆ

ಕೊನೆಗೂ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಎಂಟು ನೂತನ ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಲಾಗಿದ್ದು....

Published: 27th December 2018 12:00 PM  |   Last Updated: 27th December 2018 08:43 AM   |  A+A-


Finally MB Patil gets Home ministry

ಎಂ.ಬಿ.ಪಾಟೀಲ್

Posted By : LSB
Source : Online Desk
ಬೆಂಗಳೂರು: ಕೊನೆಗೂ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಎಂಟು ನೂತನ  ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಲಾಗಿದ್ದು, ಎಂ.ಬಿ. ಪಾಟೀಲ್​ ಅವರಿಗೆ ಗೃಹ ಖಾತೆ ಕೊಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಎಂಬಿ ಪಾಟೀಲ್ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ತಾವು ಕಾರ್ಯನಿರ್ವಹಿಸಿದ ಜಲಸಂಪನ್ಮೂಲ ಖಾತೆಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆ ಖಾತೆ ಡಿಕೆ ಶಿವಕುಮಾರ್​ ಅವರ ಬಳಿಯಿದ್ದು, ಗೃಹ ಖಾತೆಯನ್ನು ನೀಡುವುದಾಗಿ ಕೈ ಮುಖಂಡರು ಭರವಸೆ ನೀಡಿದ್ದರು. ಆದರೆ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಗೃಹ ಖಾತೆಯನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ವಿಳಂಬವಾಗಿತ್ತು.

ನೂತನ ಸಚಿವರ ಖಾತೆಗಳ ವಿವರ
1) ಎಂಬಿ ಪಾಟೀಲ್: ಗೃಹ ಖಾತೆ, ಆರ್​ಡಿಪಿಆರ್
2) ಆರ್.ಬಿ. ತಿಮ್ಮಾಪುರ: ಕೌಶಲ್ಯಾಭಿವೃದ್ಧಿ ಖಾತೆ
3) ಎಂಟಿಬಿ ನಾಗರಾಜ್: ವಸತಿ ಖಾತೆ
4) ಪರಮೇಶ್ವರ್ ನಾಯ್ಕ್:​ ಮುಜರಾಯಿ, ಐಟಿಬಿಟಿ ಖಾತೆ
5) ಸಿಎಸ್ ಶಿವಳ್ಳಿ: ಪೌರಾಡಳಿತ, ಬಂದರು ಖಾತೆ
6) ರಹೀಮ್ ಖಾನ್: ಯುವಜನ ಸೇವೆ ಮತ್ತು ಕ್ರೀಡೆ ಖಾತೆ
7) ಸತೀಶ್ ಜಾರಕಿಹೊಳಿ: ಅರಣ್ಯ ಖಾತೆ
8) ಇ. ತುಕಾರಾಮ್: ವೈದ್ಯಕೀಯ ಶಿಕ್ಷಣ ಖಾತೆ
Stay up to date on all the latest ರಾಜಕೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp