ಕುಂದಗೋಳ ಉಪ ಚುನಾವಣೆ: ಜನ ಬಯಸಿದರೆ ಕಣಕ್ಕಿಳಿಯಲು ಸಿದ್ಧ ಎಂದ ಶಿವಳ್ಳಿ ಪತ್ನಿ

ಲೋಕಸಭೆ ಚುನಾವಣೆ ಬೆನ್ನಲ್ಲೇ ಕುಂದಗೋಳ ವಿಧಾಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಣೆಯಾಗಿದ್ದು, ಕ್ಷೇತ್ರದ ಜನ ಬಯಸಿದರೆ...
ಸಿಎಸ್ ಶಿವಳ್ಳಿ, ಕುಸುಮಾ
ಸಿಎಸ್ ಶಿವಳ್ಳಿ, ಕುಸುಮಾ
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಬೆನ್ನಲ್ಲೇ ಕುಂದಗೋಳ ವಿಧಾಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಣೆಯಾಗಿದ್ದು, ಕ್ಷೇತ್ರದ ಜನ ಬಯಸಿದರೆ ತಾವು ಕಣಕ್ಕಿಳಿಯಲು ಸಿದ್ಧ ಎಂದು ಮಾಜಿ ಸಚಿವ ದಿ.ಸಿಎಸ್ ಶಿವಳ್ಳಿ ಅವರ ಪತ್ನಿ ಕುಸುಮಾ ಅವರು ಹೇಳಿದ್ದಾರೆ.
ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ನಡೆಯುತ್ತಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಹಿನ್ನೆಲೆಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಕುಸುಮಾ ಅವರು, ನಾನು ಓರ್ವ ಗೃಹಿಣಿಯಾಗಿ ಮನೆ ನಿಭಾಯಿಸಿದ್ದನ್ನು ಬಿಟ್ಟರೆ ಚುನಾವಣೆಯ ಒಳ-ಹೊರ ಏನೂ ಗೊತ್ತಿಲ್ಲ. ಆದರೆ ಕ್ಷೇತ್ರದ ಜನ ಬಯಸಿದರೆ ಹಾಗೂ ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವಂತೆ ಸೂಚಿಸಿದರೆ ಕಣಕ್ಕೆ ಇಳಿಯಲು ಸಿದ್ಧ ಎಂದಿದ್ದಾರೆ.
ನನ್ನ ಪತಿ ತೀರಿಹೋದ ನಂತರ ಸಾಂತ್ವನ ಹೇಳಲು ಬಂದ ಸಾವಿರಾರು ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ. ಅದು ನನ್ನ ಪತಿದೇವರ ಆರ್ಶೀವಾದ ಎಂದು ತಿಳಿಯುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com