ಬಿಜೆಪಿಯಿಂದ ಮತ್ತದೇ ಹಳೆಯ ಕುತಂತ್ರ, ಎಡಿಟೆಡ್ ವಿಡಿಯೋ ಮೂಲಕ ಚಾರಿತ್ರ್ಯವಧೆ ಪ್ರಯತ್ನ: ಎಚ್ ಡಿ ಕುಮಾರಸ್ವಾಮಿ

ಸೇನೆ ಕುರಿತ ತಮ್ಮ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿಗೆ ಎಚ್ ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದು, ಬಿಜೆಪಿ ಮತ್ತದೇ ತನ್ನ ಹಳೆಯ ಕುತಂತ್ರದ ರಾಜಕಾರಣ ಮಾಡುತ್ತಿದ್ದು, ಎಡಿಟೆಡ್ ವಿಡಿಯೋ ಮೂಲಕ ತನ್ನ ಚಾರಿತ್ರ್ಯವಧೆಗೆ ಮುಂದಾಗಿದೆ ಎಂದು ತಿರುಗೇಟು ನೀಡಿದ್ದಾರೆ.

Published: 11th April 2019 12:00 PM  |   Last Updated: 11th April 2019 11:17 AM   |  A+A-


BJP posted another edited video with false interpretation to malign me: HD Kumaraswamy

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ಸೇನೆ ಕುರಿತ ತಮ್ಮ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿಗೆ ಎಚ್ ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದು, ಬಿಜೆಪಿ ಮತ್ತದೇ ತನ್ನ ಹಳೆಯ ಕುತಂತ್ರದ ರಾಜಕಾರಣ ಮಾಡುತ್ತಿದ್ದು, ಎಡಿಟೆಡ್ ವಿಡಿಯೋ ಮೂಲಕ ತನ್ನ ಚಾರಿತ್ರ್ಯವಧೆಗೆ ಮುಂದಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಬಿಜೆಪಿ ಮತ್ತದೇ ತನ್ನ ಹಳೆಯ ಕುತಂತ್ರವನ್ನು ನನ್ನ ವಿರುದ್ಧ ಪ್ರಯೋಗಿಸಿದ್ದು, ನನ್ನ ಹೇಳಿಕೆಯನ್ನು ತಿರುಚಿದ ಎಡಿಟೆಡ್ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ನನ್ನ ಚಾರಿತ್ರ್ಯವಧೆಗೆ ಪ್ರಯತ್ನಿಸಿದೆ ಹರಿಹಾಯ್ದಿದ್ದಾರೆ.

ಅಂತೆಯೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, 'ನಾನು ಸೇನೆಗೆ ಸೇರುವ ಎಲ್ಲ ಯೋಧರೂ ಶ್ರೀಮಂತರಾಗಿರುವುದಿಲ್ಲ. ಎರಡು ಹೊತ್ತಿನ ಅನ್ನಕ್ಕೂ ಪರದಾಡುವ ಅನೇಕ ಯುವಕರಿದ್ದಾರೆ. ಇಂತಹ ಅಮಾಯಕರ ಜೀವದೊಂದಿಗೆ ಪ್ರಧಾನಿ ಮೋದಿ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ಮತ ಬೇಟೆಗೆ ಪ್ರಧಾನಿ ಮೋದಿ ಸೈನಿಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೆ. ಅಷ್ಟೇ ಹೊರತು ಎರಡು ಹೊತ್ತಿನ ಊಟಕ್ಕಾಗಿ ಸೈನಿಕರು ಸೇನೆ ಸೇರುತ್ತಿದ್ದಾರೆ ಎಂದು ಹೇಳಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp