ಬಿಜೆಪಿಗೆ ವೋಟ್ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಸಿದ್ದರಾಮಯ್ಯ

ಬಿಜೆಪಿಗೆ ಮತ ಹಾಕಿದರೆ , ನೀವು ಪಾಕಿಸ್ತಾನಕ್ಕೆ ಮತ ಚಲಾಯಿಸುತ್ತಿದ್ದೀರಿ ಎಂದರ್ಥ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು:  ಬಿಜೆಪಿಗೆ ಮತ ಹಾಕಿದರೆ , ನೀವು ಪಾಕಿಸ್ತಾನಕ್ಕೆ ಮತ ಚಲಾಯಿಸುತ್ತಿದ್ದೀರಿ ಎಂದರ್ಥ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಭಾರತದ ಪ್ರಧಾನಿ ಆಗಬೇಕೆಂದು ಪಾಕಿಸ್ತಾನ ಬಯಸುತ್ತಿದೆ ಎಂಬ  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇಮ್ರಾನ್ ಖಾನ್  ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಕಾರಣ ಏನು ?  ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮುಂದೆ ಭಾರತವನ್ನು ಘಾಸಿಗೊಳಿಸಲಿದೆ. ಇದು ಹೇಗೆಂದರೆ ಥೇಟ್ ಅಮೆರಿಕಕ್ಕೆ ರಷ್ಯಾ ಮಾಡಿದಂತೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ನರೇಂದ್ರ ಮೋದಿ ಅವರಂತೆ ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರೀಯ ಭದ್ರತೆಯನ್ನು ಕಾಂಗ್ರೆಸ್ ಎಂದೂ ಬಲಿ ಕೊಟ್ಟಿಲ್ಲ. ಬಿಜೆಪಿ ರಾಜಕೀಯದಾಟದಿಂದ ನಮ್ಮ ವೀರ ಯೋಧರನ್ನು ಕಳೆದುಕೊಂಡಿದ್ದೇವೆ. ಬಿಜೆಪಿಗೆ ಮತ ಹಾಕಿದರೆ ನೀವು ಪಾಕಿಸ್ತಾನಕ್ಕೆ ಮತ ಹಾಕುತ್ತಿದ್ದೀರಿ ಎಂದೇ ಅರ್ಥ ಎಂದು ಸಿದ್ದರಾಮಯ್ಯ  ಪುನರುಚ್ಚರಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com