ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್ ಗೆ ಸಚಿವ ಸ್ಛಾನ ಖಚಿತ: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸಿಟಿ ರವಿ ಅಥವಾ ಲಿಂಬಾವಳಿ?

ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ನಡೆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಅವರ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ,
ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ನಡೆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಅವರ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ, ಇದೇ ಮೊದಲ ಬಾರಿಗೆ ಸಿಎಂ ಆಗಿದ್ದವರೊಬ್ಬರು ಸಚಿವರಾಗಿ  ಕಾರ್ಯ ನಿರ್ವಹಿಸುವುದು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊದಲಾಗಿದೆ. 
ಹುಬ್ಬಳ್ಳಿ ಮೂಲದ 63 ವರ್ಷದ ಜಗದೀಶ್ ಶೆಟ್ಟರ್ 2008 ರಲ್ಲಿ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅದರ ಮರು ವರ್ಷ ಯಡಿಯೂರಪ್ಪ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ನೇಮಕವಾಗಿದ್ದರು, ಲಿಂಗಾಯತರ ಪ್ರಮುಖ ನಾಯಕರಾಗಿರುವ ಶೆಟ್ಟರ್ 2012 ರಲ್ಲಿ ಡಿವಿ ಸದಾನಂದಗೌಡ ಅವರ ಬದಲಿಗೆ ಮುಖ್ಯಮಂತ್ರಿಯಾಗಿದ್ದರು.,
ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕನಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ಖಚಿತವಾಗಿ ಸಿಗಲಿದೆ,  ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೇ  ಹಲವು ಉಪಯೋಗಗಳು ಆಗುತ್ತವೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಲಿಂಗಾಯಿತರಿದ್ದು, ಅವರ ವಿಶ್ವಾಸ ಗಳಿಸಲು ಸಾಧ್ಯವಾಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಯಡಿಯೂರಪ್ಪ ಶೀಘ್ರವೇ ದೆಹಲಿಗೆ ತೆರಳಲಿದ್ದು ಸಂಪುಟ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಫೈನಲ್ ಮಾಡಲಿದ್ದಾರೆ.  ಯಡಿಯೂರಪ್ಪ ಸಿದ್ದ ಪಡಿಸಿ ತೆಗೆದುಕೊಂಡು ಹೋಗುವ ಪಟ್ಟಿಯ ಎಲ್ಲರಿಗೂ ಹೈಕಮಾಂಡ್ ಅನುಮೋದನೆ ನೀಡುವುದಿಲ್ಲ, ಆದರೆ ಶೆಟ್ಟರ್ ಗೆ ಮಾತ್ರ ಸ್ಥಾನ ಖಚಿತ,  ಏಕೆಂದರೇ ಶೆಟ್ಟರ್ ಅವರನ್ನು ಸ್ಪೀಕರ್ ಆಗಿ ನೇಮಿಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿತು, ಆದರೆ ಆದಕ್ಕೆ ಹೈಕಮಾಂಡ್ ಬ್ರೇಕ್ ಆಗಿದೆ. 
ಶೆಟ್ಟರ್ ಬಹಳ ವಿದೇಯ ವ್ಯಕ್ತಿ,.ಸಿಎಂ ಆಗಿದ್ದವರು ಮಂತ್ರಿಯಾಗಿ ಕೆಲಸ ಮಾಡಲು ಅವರ ತಕರಾರು ಇಲ್ಲ, ಅವರು ಅರ್ಹರು ಹಾಗೂ ಸಮರ್ಥರು ಎಂದು ಪಕ್ಷದ ಮೂಲಗಳು ತಿಳಿಸಿವೆ, ಮೊದಲ ಕಂತಿನಲ್ಲಿ 10-15 ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಆಧರೆ ಈ ಬಗ್ಗೆ ಶೆಟ್ಟರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ, ಪಕ್ಷ ಯಾವುದೇ ಹುದ್ದೆ ನೀಡಿದರು ನಾನು ಸ್ವೀಕರಿಸುತ್ತೇವೆ ಎಂದು  ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಸಿಎಂ ಆಗಿರುವ ಕಾರಣ ಮುಂದಿನ ಕೆಲ ದಿನಗಳಲ್ಲಿ ಬಿದೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ,. ಸಿಟಿ ರವಿ ಮತ್ತು ಅರವಿಂದ ಲಿಂಬಾವಳಿ ಹೆಸರು ಕೇಳಿ ಬರುತ್ತಿವೆ, 

Related Stories

No stories found.

Advertisement

X
Kannada Prabha
www.kannadaprabha.com