ಹೈಕಮಾಂಡ್ ವಿಶ್ವಾಸ ಕಳೆದುಕೊಂಡರೇ ಸಿದ್ದರಾಮಯ್ಯ?: 120 ಸೀಟ್ ಗೆಲ್ಲಿಸುವ ಚಾಣಕ್ಯನಿಗೆ ವಿಪಕ್ಷ ನಾಯಕನ ಸ್ಥಾನ!

ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಅವರೊಬ್ಬರೇ ಸಾಮೂಹಿಕ ನಾಯಕತ್ವ ಹೊಂದಿರುವ ಲೀಡರ್ ಆಗಿದ್ದಾರೆ. ಹೀಗಾಗಿ ಸಿಎಲ್ ಪಿ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಅವರೊಬ್ಬರೇ ಸಾಮೂಹಿಕ ನಾಯಕತ್ವ ಹೊಂದಿರುವ ಲೀಡರ್ ಆಗಿದ್ದಾರೆ. ಹೀಗಾಗಿ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ನೇಮಿಸುವ ಸಾಧ್ಯತೆಯಿದೆ., ಎಂದು ಹೇಳಲಾಗುತ್ತಿದೆ.
ಸದ್ಯ ಕರ್ನಾಟಕದ ನಾಯಕತ್ವವನ್ನು ಬದಲಾಯಿಸಲು ಹೈಕಮಾಂಡ್ ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರುಗಳೇ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದದ್ದು ಕಾಂಗ್ರೆಸ್ ಹೈ ಕಮಾಂಡ್ ಗೆ ತೀವ್ರ ಬೇಸರ ತಂದಿದೆ, ಎಂದು ಕಾಂಗ್ರೆಸ್ ಪಕ್ಷದೊಳಗೆ ಕೆಲ ಮುಖಂಡರು ಮಾತನಾಡುತ್ತಿದ್ದಾರೆ,
ಪಕ್ಷದೊಳಗಿನ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರ ಪತನಗೊಳ್ಳಲು ಕಾರಣ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಸರ್ಕಾರ ಪತನಗೊಂಡ ನಂತರ, ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಆರಂಭಿಸಿದೆ.
ವಿರೋಧ ಪಕ್ಷದ ಪ್ರತಿಪಕ್ಷ ಸ್ಥಾನಕ್ಕೆ  ಡಿಕೆ ಶಿವಕುಮಾರ್, ಜಿ ಪರಮೇಶ್ವರ್, ಹಾಗೂ ಕೃಷ್ಣ ಬೈರೇಗೌಡ ಹೆಸರು ಕೇಳಿ ಬರುತ್ತಿವೆ, ಆದರೆ ಅಂತಿಮವಾಗಿ ಆಯ್ಯೆಯಾಗುವವರೆಗೂ ಕಾಂಗ್ರೆಸ್ ನಲ್ಲಿ ಏನು ಬದಲಾವಣೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರ ಜೊತೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ.
ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರಿಗೆ ವಹಿಸಿದೆ, ಹೀಗಾಗಿ ಪಕ್ಷವನ್ನು 120 ಸೀಟುಗಳಿಂದ ಗೆಲ್ಲಿಸುವಂತ ವ್ಯಕ್ತಿಗಾಗಿ ಭೇಟೆ ಆರಂಭಿಸಿದೆ. ಕುಂದಗೋಳ ಉಪ ಚುನಾವಣೆಯಲ್ಲಿ ದಿವಂಗತ ಸಿಎಸ್ ಶಿವಳ್ಳಿ ಅವರ ಪತ್ನಿಯನ್ನು ಗೆಲ್ಲಿಸುವಲ್ಲಿ ಡಿಕೆ ಶಿವಕುಮಾರ್, ಪ್ರಮುಖ ಪಾತ್ರ ವಹಿಸಿದ್ದರು, ಹಾಗೆಯೇ  2018ರ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿ ವಿ,ಎಸ್ ಉಗ್ರಪ್ಪ ಅವರನ್ನು ಗೆಲ್ಲಿಸಿದ್ದರು., ಶಿವಕುಮಾರ್ ಅವರ ಟ್ರಬಲ್ ಶೂಟಿಂಗ್ ಕೌಶಲ್ಯ ಹಾಗೂ ಸೂಕ್ಷ್ಮ ಸಂದರ್ಭಗಶಳಲ್ಲಿ, ಸಮ್ಮಿಶ್ರ ಸರ್ಕಾರವನ್ನು ಬಚಾವ್ ಮಾಡಲು ಹಲವು ತಂತ್ರ ರೂಪಿಸಿದ್ದರು. 
ಇನ್ನೂ ದಲಿತ ನಾಯಕ ಜಿ, ಪರಮೇಶ್ವರ್ ಅವರ ಮುಂದಾಳತ್ವದಲ್ಲಿ 2013 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಲವು  ಸೀಟುಗಳನ್ನು ಗೆದ್ದಿತ್ತು,.ಆದರೆ ತಾವೇ ಸೋತ ಕಾರಣ ಸಿಎಂ ಆಗುವ ಅವಕಾಶ ಕೈ ತಪ್ಪಿತ್ತು. ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಸ್ಪರ್ಧಿಸಿದ್ದ ತಮ್ಮ ಸಂಬಂಧಿಯನ್ನು ಗೆಲ್ಲಿಸಿಕೊಳ್ಳಲಾಗದ ಎಚ್ ಕೆ ಪಾಟೀಲ್ 120 ಸೀಟುಗಳನ್ನು ಗೆಲ್ಲಿಸಿಕೊಡಲು ಸಾಧ್ಯವೆ ಎಂಬ ಪ್ರಶ್ನೆ ಕೇಳಿ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com