'ಸೋನಿಯಾ ಗೆದ್ದು ನಂತರ ಬಳ್ಳಾರಿ ತೊರೆದರು: ಸೋತರೂ ಸುಷ್ಮಾಗಿತ್ತು ಅವಿನಾಭಾವ ನಂಟು'

ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ರಾಷ್ಟ್ರದ ಭಾವುಟದಲ್ಲಿ ಚಿರಪರಿಚಿತವಾಯಿತು. ಆದರೆ ಕರ್ನಾಟಕದಲ್ಲಿ ಬಿಜೆಪಿ ಬೇರೂರಲು ಬಳ್ಳಾರಿ ಕೂಡ ಪ್ರಮುಖ ...
ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ( ಸಂಗ್ರಹ ಚಿತ್ರ)
ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ( ಸಂಗ್ರಹ ಚಿತ್ರ)
ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ರಾಷ್ಟ್ರದ ಭಾವುಟದಲ್ಲಿ ಚಿರಪರಿಚಿತವಾಯಿತು. ಆದರೆ ಕರ್ನಾಟಕದಲ್ಲಿ ಬಿಜೆಪಿ ಬೇರೂರಲು ಬಳ್ಳಾರಿ ಕೂಡ ಪ್ರಮುಖ ಪಾತ್ರ ವಹಿಸಿದೆ. 
1999ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಸೋನಿಯಾ ಗಾಂಧಿ ವಿರುದ್ಧ ಸೋತಿದ್ದರು.  ಸೋನಿಯಾ ಗಾಂಝಿ 56,100 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿ ನಿಧಾನವಾಗಿ ಆಕ್ರಮಿಸಿಕೊಳ್ಳಲು ಶುರುವಾಯಿತು. ಅದಾದ ಕೆಲವು ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿತು. 
ಅದಕ್ಕೂ ಹಿಂದಿನ ಚುನಾವಣೆಗಳಲ್ಲಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಡಾ. ಶ್ರೀನಿವಾಸ ಮೂರ್ತಿ ಅವರನ್ನು ಬಳ್ಳಾರಿ ಬಿಜೆಪಿಯಲ್ಲಿ ಯಾವುದೇ ಪ್ರಮುಖ ನಾಯಕರಿರಲಿಲ್ಲ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಕ್ಷೇತ್ರದ ಫಲಿತಾಂಶದಿಂದ ಯಾರಿಗೂ ಅಚ್ಚರಿಯಾಗಲಿಲ್ಲ, ಆದರೆ ಗೆದ್ದ ಅಂತರ ಮಾತ್ರ ಕಡಿಮೆಯಾಗಿತ್ತು. 
ತಮ್ಮ ಉತ್ತಮ ಭಾಷಣದ ಮೂಲಕ ಹಾಗೂ ಸ್ವದೇಶಿ-ವಿದೇಶಿ ಘೋಷಣೆಗಳ ಮೂಲಕ ಸುಷ್ಮಾ ಅಲ್ಲಿನ ಜನರ ಮನ ಗೆದ್ದಿದ್ದರು. ಎಲ್ಲರಿಗೂ ಎತ್ತರದ ನಾಯಕಿಯಾಗಿದ್ದ ಸುಷ್ಮಾ ಕಡೆ ಎಲ್ಲರು ತಿರುಗಿ ನೋಡುವಂತಾಯಿತು. ಕನ್ನಡದಲ್ಲಿ ಮಾತನಾಡುವ ಮೂಲಕ ಅಲ್ಲಿನ ಜನಮನ ಗೆದ್ದರು, ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸೋನಿಯಾ ಬಳ್ಳಾರಿ ತೊರೆದರು, ಆದರೆ ಸೋತರು ಸುಷ್ಮಾ ಸ್ವರಾಜ್ ಬಳ್ಳಾರಿ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಡಾ. ಬಿಕೆ ಸುಂದರ್ ಹೇಳಿದ್ದಾರೆ.
1999ರ ಲೋಕಸಭೆ ಚುನಾವಣೆಯಿಂದಾಗಿ ಬಿಜೆಪಿ ರಾಜ್ಯಾದ್ಯಂತ ವಿಸ್ತರಿಸಲು ಸಾಧ್ಯವಾಯಿತು,  ಕನ್ನಡ ಕಲಿತ ಸುಷ್ಮಾ ಸ್ವರಾಜ್ ಸ್ಥಳಿಯರ ಸಮಸ್ಯೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಚ್ ಶಂಕರಮೂರ್ತಿ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಕೇಂದ್ರ ಸಚಿವೆಯಾಗಿದ್ದಾಗ ಬಳ್ಳಾರಿಯಲ್ಲಿ ಹಲವು ಜನಹಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದಾಗ ಬಳ್ಳಾರಿಗೆ ಎಫ್ ಎಂ ರೇಡಿಯೋ ತಂದರು,  ಬಳ್ಳಾರಿಯಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ನಡೆಸಿದರು. ವಿದೇಶಾಂಗ ಸಚಿವೆಯಾಗಿದ್ದಾಗ ಬಳ್ಳಾರಿಯಲ್ಲಿ ಪಾಸ್ ಪೋರ್ಟ್ ಕಚೇರಿ ಆರಂಭಿಸಿದರು ಎಂದು ಬಳ್ಳಾರಿ ಮಾಜಿ ಮೇಯರ್ ಪಾರ್ವತಿ ತಿಳಿಸಿದ್ದಾರೆ.,
1999ರ ಚುನಾವಣೆಯಲ್ಲಿ ಸೋತರು  ಬಳ್ಳಾರಿ  ಮಗಳಾಗಿ ತಾವು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಸುಷ್ಮಾ ಘೋಷಿಸಿದ್ದರು, ಅದರಂತೆ ಕೆಲವು ವರ್ಷ ಸುಷ್ಮಾ ಬಳ್ಳಾರಿಗೆ ಬರುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com