ಪ್ರಜಾಪ್ರಭುತ್ವದ ಅವ್ಯವಸ್ಥೆ ಕುರಿತು ಸ್ಟಾಲಿನ್ ಅಣಕ: ಉಪ್ಪಿ ಟ್ವೀಟ್ ವೈರಲ್

ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿ ರಾಜಕೀಯ ಅಂಗಳಕ್ಕೆ ಇಳಿದಿರುವ ನಟ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಟ್ವೀಟ್ ಗಳ ಮೂಲಕ ಮತದಾರನ ಜಾಗೃತಗೊಳಿಸುವ ಕೆಲಸ ಮುಂದುವರೆಸಿದ್ದಾರೆ.

Published: 13th August 2019 08:53 PM  |   Last Updated: 13th August 2019 09:03 PM   |  A+A-


Upendra Tweet

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿ ರಾಜಕೀಯ ಅಂಗಳಕ್ಕೆ ಇಳಿದಿರುವ ನಟ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಟ್ವೀಟ್ ಗಳ ಮೂಲಕ ಮತದಾರನ ಜಾಗೃತಗೊಳಿಸುವ ಕೆಲಸ ಮುಂದುವರೆಸಿದ್ದಾರೆ.

ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಉಪ್ಪಿ ಇದೀಗ ಸೋವಿಯತ್ ಒಕ್ಕೂಟದ ನೇತಾರ ಜೋಸಫ್ ಸ್ಟಾಲಿನ್ ಹಾಗೂ ಕೋಳಿಯ ನಿದರ್ಶನದೊಂದಿಗೆ ದೇಶದ ಇಂದಿನ ಪ್ರಜ್ಞಾಪ್ರಭುತ್ವ ವ್ಯವಸ್ಥೆಯ ಅವಸ್ಥೆ ಕುರಿತು ವ್ಯಂಗ್ಯವಾಡಿರುವ ಟ್ವೀಟ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಕೋಳಿಯ ರೆಕ್ಕೆ ಪುಕ್ಕ ಕಿತ್ತು ಬಿಸಾಕುವ ಸ್ಟಾಲಿನ್ ಅದೇ ಕೋಳಿಗೆ ಕಾಳುಗಳನ್ನು ಹಾಕಿ ತನ್ನ ಹಿಂದೆ ಬರುವಂತೆ ಮಾಡುತ್ತಾನೆ. ಇಂದಿನ ರಾಜಕೀಯ ಮುಖಂಡರೂ ಕೂಡ ಪ್ರಜೆಗಳ ಹಕ್ಕುಗಳನ್ನು ಕಿತ್ತುಕೊಂಡು ಆಗಾಗ ಸಣ್ಣಪುಟ್ಟಕೆಲಸ ಮಾಡಿ ದೇವರಾಗುತ್ತಿದ್ದಾರೆ ಎಂದು ಉಪ್ಪಿ ವ್ಯಂಗ್ಯ ಮಾಡಿದ್ದಾರೆ.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp